Tuesday, January 21, 2025
ಸುದ್ದಿ

ದಕ್ಷಿಣ ಕನ್ನಡ ಮಂಗಳೂರು ಮುಲ್ಕಿ ಪರಿಸರದ ಶ್ರೀಮಂತ ಎಂದು ಎನಿಸಿಕೊಂಡ ಅಂತಾರಾಷ್ಟ್ರೀಯ ಮಟ್ಟದ ನಾಲ್ಕು ಕಳ್ಳರ ಬಂಧನ – ಕಹಳೆ ನ್ಯೂಸ್

ಮಂಗಳೂರು :ನಾಲ್ವರು ಅಂತಾರಾಷ್ಟ್ರೀಯ ಕಳ್ಳರನ್ನು ಬಂಧಿಸಿಲಾಗಿದೆ. ಶ್ರೀಮಂತ ವ್ಯಕ್ತಿಗಳಾಗೆ ಮುಖವಾಡ ಧರಿಸಿ ಹಗಲು ಹೊತ್ತು ಐಷಾರಾಮಿ ಕಾರುಗಳಲ್ಲಿ ತಿರುಗಾಡಿ ಯಾರು ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ಸಮಯದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ದುಡ್ಡು ಹಾಗು ಇನ್ನಿತರ ಅಮೂಲ್ಯ ವಸ್ತುಗಳನ್ನು ಕದಿಯುತ್ತಿದ್ದರು. ಈ ಶ್ರೀಮಂತ ಎಂದು ಎನಿಸಿಕೊಂಡಿರುವ ವ್ಯಕ್ತಿಗಳಲ್ಲಿ ಪ್ರಮುಖ ಕಳ್ಳರ ಪಟ್ಟಿಯಲ್ಲಿ ಹೆಸರಾಂತ ಉದ್ಯಮಿ ಎಂಬ ಪಟ್ಟ ಕಟ್ಟಿಕೊಂಡಿರುವ ಕೆ.ಎಚ್ ಕಾರ್ನಾಡ್ ಮುನೀರ್ ಎಂಬವರ ಪುತ್ರ ಹಿಯಾಝ್ ಕಾರ್ನಾಡ್ ನೇತೃತ್ವದ ಕಳ್ಳರ ತಂಡದಿಂದ ವಶಪಡಿಸಿಕೊಂಡ ಒಂದು ಪೊರ್ಚುನರ್ ಕಾರು ಮೂರೂ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕ್ ಹಾಗು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನೂ ಪೊಲೀಸರು ಹೂಸಪಡಿಸಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆ ಹಚ್ಚಲು ಪೊಲೀಸ್ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು