Tuesday, January 21, 2025
ಸುದ್ದಿ

ಇಂದು ಮಧ್ಯರಾತ್ರಿಯಿಂದ ‘ವಾಯು’ ತೀವ್ರತೆ ಕುಸಿತ; ಆದ್ರೂ ಕಛ್ ಜಿಲ್ಲೆಯಲ್ಲಿ ಹೈ ಅಲರ್ಟ್ – ಕಹಳೆ ನ್ಯೂಸ್

ಅಹಮದಾಬಾದ್ : ಕೆಲವು ದಿನಗಳ ಹಿಂದೆ ಗುಜರಾತ್ ಹಾಗೂ ರಾಜಸ್ಥಾನಕ್ಕೆ ಅಪ್ಪಳಿಸಿದ್ದ ‘ವಾಯು’ ಚಂಡಮಾರುತದ ತೀವ್ರತೆ ಸೋಮವಾರ ಮಧ್ಯರಾತ್ರಿಯಿಂದ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ ಕಛ್ ಜಿಲ್ಲೆಯಲ್ಲಿ ಮಳೆಯಾಗುವ ಭಾರೀ ಸಾಧ್ಯತೆ ಇದೆ ಎಂದು ಹೈ ಅಲರ್ಟ್ ಘೋಷಿಸಲಾಗಿದೆ.

ಜೂನ್ 17ರ ಸೋಮವಾರ ಮಧ್ಯರಾತ್ರಿ ಈಶಾನ್ಯ ಹಾಗೂ ಉತ್ತರ ಗುಜರಾತ್ನ ಕರಾವಳಿ ತೀರದ ಕಡೆ ಮಾರುತಗಳು ಸಾಗಲಿದ್ದು, ಚಂಡಮಾರುತದ ಪ್ರಭಾವ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಅರೇಬಿಯನ್ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಲಿದ್ದು, ಕರಾವಳಿಯುದ್ದಕ್ಕೂ ಈ ಪ್ರಭಾವ ಹಾಗೇಯೇ ಇರುತ್ತದೆ. ಹೀಗಾಗಿ ಮುಂದಿನ 24 ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 5 ಎನ್‍ಡಿಆರ್‍ಎಫ್ ತಂಡ ಜಿಲ್ಲೆಯ ಹಲವು ಕಡೆ ಬೀಡು ಬಿಟ್ಟಿದ್ದು, ಅಗತ್ಯ ನೆರವು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿವೆ ಎಂದು ಕಛ್ ಜಿಲ್ಲಾಧಿಕಾರಿ ರೆಮ್ಯಾ ಮೋಹನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು