ನಿಜ ಕಲ್ಲಡ್ಕ ಹೊತ್ತಿ ಉರಿಯುತ್ತಿದೆ ಆದ್ರೆ ಅದು ಸಿನೆಮಾ ಪೋಸ್ಟರ್‌ನಲ್ಲಿ..
ಹೌದು.. ಕರಾವಳಿಯ ಕೋಮು ಗಲಭೆಗೆ ಹೆಸರಾದ ಸೂಕ್ಷ್ಮಪ್ರದೇಶ ‘ಕಲ್ಲಡ್ಕ’ ಹೆಸರಿನಲ್ಲೀಗ ಕನ್ನಡದಲ್ಲೊಂದು ಸಿನೆಮಾ ತಯಾರಾಗಲು ಈಗಾಗಲೆ ತಯಾರಿ ಶುರುವಾಗಿದೆ.
ಕಲ್ಲಡ್ಕ ಸಿನೆಮಾವನ್ನು ಮಾಡುತ್ತಿರುವುದು ಕರಾವಳಿಯವರೇ ಆದ ಇಸ್ಮಾಯಿಲ್ ಮೂಡುಶೆಡ್ಡೆ. ಇಸ್ಮಾಯಲ್ ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ತಲಾ ಒಂದು ಸಿನೆಮಾ ನಿರ್ದೇಶಿಸಿದ್ದಾರೆ. ತದನಂತರ ತುಳುವಿನಲ್ಲಿ ‘ಭೋಜರಾಜ್ ಎಂ.ಬಿ.ಬಿ.ಎಸ್.’ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ಸದ್ದಿಲ್ಲದೇ ಚಿತ್ರೀಕರಣ ನಡೆಸಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಂತರ ಕಟ್ಟದ ಕೋರಿ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಾರೆಂದು ಊಹಿಸಲಾಗಿತ್ತು.
ಆದರೆ ಕಲ್ಲಡ್ಕ ಎಂಬ ಶೀರ್ಷಿಕೆಯ ಪೋಸ್ಟರನ್ನು ಬಿಟ್ಟು ಇದೊಂದು ರಾಜಕೀಯ ಪ್ರೇರಿತ ಕೋಮು ದಳ್ಳುರಿಯ ಬೆಂಕಿಯಲ್ಲಿ ಅರಳುವ ಒಂದು ಸುಂದರ ಪ್ರೇಮಕಥೆ ಎಂಬ ಮಾಹಿತಿಯನ್ನು ನೀಡಿದ್ದಾರೆ ನಿರ್ದೇಶಕರು. ಆದರೆ ಈ ಲವ್ ಸ್ಟೋರಿಯೊಂದಿಗೆ ಕಲ್ಲಡ್ಕದ ಯಾವೆಲ್ಲ ಅಂಶಗಳು ಚಿತ್ರದಲ್ಲಿರಲಿವೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್ ಪುತ್ತೂರು.