Monday, November 25, 2024
ಸುದ್ದಿ

ಹೊನ್ನಾವರ ತಾಲೂಕಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ವಿತರಣೆ – ಕಹಳೆ ನ್ಯೂಸ್

ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನ ವಿಷಯ ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ. ಇದರಿಂದ ಹುಟ್ಟಿದ ಮೂಡನಂಬಿಕೆಗಳಿಗೆ ಹೆಣ್ಣೆ ಮುಖ್ಯವಾಗಿ ಗುರಿಯಾಗುತ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನವ ಜನ್ಮದಲ್ಲಿಯೇ ಹೆಣ್ಣಿನ ಜನ್ಮ ಶ್ರೇಷ್ಠವಾದಂತಹ ಜನ್ಮ. ಹೆಣ್ಣು ಮಗು ಹುಟ್ಟಿದರೆ ಅದು ಶಾಪವಲ್ಲ, ಬದಲಾಗಿ ವರ ಎಂದು ಖಚಿತಪಡಿಸಲು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಆಗಿನ ಸರ್ಕಾರ 2006-07 ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಡತನ ರೇಖೆಗಿಂತ ಕೆಳಗಿನ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಯೋಜನೆಯ ಲಾಭ ದೊರೆಯಲಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಹಿಂದೇಟು ಹಾಕಬಾರದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯನ್ನು ನಿಜ ಮಾಡಬೇಕು. ಮಹಿಳಾಪರ ಕಾಳಜಿ ಇರುವ ಈ ಯೋಜನೆ ನಿರಂತರವಾಗಿ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ, ಹೊನ್ನಾವರ ತಾಲೂಕಿನ ಸರಿ ಸುಮಾರು 125 ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್‍ನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.