Wednesday, January 22, 2025
ಸುದ್ದಿ

ಜೂನ್ 19ರಂದು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ವಿವೇಕಾನಂದ ಕಾಲೇಜು ಹಾಗೂ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಜೂನ್.19ರಂದು ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ.ಜಯರಾಮ ಭಟ್, ಕೋಶಾಧಿಕಾರಿ ಸೇಡಿಯಾಪು ಜನಾರ್ಧನ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೂರ್ಯನಾರಾಯಣ ರಾವ್, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಆಡಳಿತ ಮಂಡಳಿ ಹಾಗೂ ರಕ್ಷಕ ಶಿಕ್ಷಕ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿರುವರು.

ಸ್ವಾಗತ ಕಾರ್ಯಕ್ರಮದ ತರುವಾಯ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರಿಂದ ಕಾಲೇಜಿನ ಬಗೆಗಿನ ವಿಶೇಷ ಮಾಹಿತಿ ಕಾಯಾಗಾರ ನಡೆಯಲಿದೆ. ಕಾಲೇಜಿನ ರೀತಿ ನೀತಿಗಳು, ವಿವಿಧ ಅವಕಾಶಗಳು, ನಾನಾ ವಿದ್ಯಾರ್ಥಿ ವೇತನಗಳು, ಪರೀಕ್ಷಾ ವ್ಯವಸ್ಥೆ, ಜೀವನ ಮೌಲ್ಯ ಹಾಗೂ ಶಿಸ್ತು ಮೊದಲಾದ ವಿಚಾರಗಳ ಬಗೆಗೆ ಪ್ರಸ್ತುತಿಯನ್ನು ಪ್ರಾಂಶುಪಾಲರು ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು