Wednesday, January 22, 2025
ಸುದ್ದಿ

ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಡಾ.ಕಲಾಂ ವಿಜ್ಞಾನ ಪ್ರಯೋಗಾಲಯ’ದ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಡಾ.ಕಲಾಂ ವಿಜ್ಞಾನ ಪ್ರಯೋಗಾಲಯ’ದ ಉದ್ಘಾಟನಾ ಸಮಾರಂಭ ದಿನಾಂಕ 22.06.2019ರಂದು ನಡೆಯಲಿದೆ. ಡಾ ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು(ರಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಅಂಗಾರ ಮಾನ್ಯಶಾಸಕರು ಸುಳ್ಯವಿಧಾನಸಭಾ ಕ್ಷೇತ್ರ ಪ್ರಯೋಗಾಲಯ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಘುನಂದನ್ ಸಿಸ್ಕೋ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ, ಉದ್ಯಮಿಗಳಾದ ಶ್ರೀ ಮಾಧವ ಗೌಡ ಕತ್ಲಡ್ಕ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಕೃಷ್ಣ ಶೆಟ್ಟಿ ಕಡಬ, ಜತೆ ಕಾರ್ಯದರ್ಶಿಗಳು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ), ಶ್ರೀ ರವಿರಾಜ್ ಶೆಟ್ಟಿ ಕಡಬ, ಅಧ್ಯಕ್ಷರು ಸರಸ್ವತೀ ಸಮೂಹ ಸಂಸ್ಥೆಗಳು ಕಡಬ, ಶ್ರೀ ವೆಂಕಟ್ರಮಣ ರಾವ್ ಮಂಕುಡೆ, ಕಾರ್ಯದರ್ಶಿಗಳು ಸರಸ್ವತೀ ಸಮೂಹ ಸಂಸ್ಥೆಗಳು ಕಡಬ, ಸಿಸ್ಕೋ ಸಂಭ್ರಮ ತಂಡ ಬೆಂಗಳೂರು, ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು