Wednesday, January 22, 2025
ಸುದ್ದಿ

ವಿದ್ಯಾರ್ಥಿ ಸಂಸತ್ತು ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟನೆ – ಕಹಳೆ ನ್ಯೂಸ್

ಕುಮಟಾ: ಸಂಸತ್ತು ನಮ್ಮ ದೇಶದ ಹೃದಯವೇ ಆಗಿದ್ದು ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳು, ಆಡಳಿತ ಸೂತ್ರಗಳು ನಮ್ಮ ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಸಂಸತ್ತಿನ ಬಗ್ಗೆ ತಿಳಿಯುವಂತೆ ಆಗಬೇಕು ಎಂಬ ಉದ್ದೇಶದಿಂದ, ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಜೂ 18. ಮಂಗಳವಾರ ಬೆಳಿಗ್ಗೆ 10.30ಕ್ಕೆ ವಿದ್ಯಾರ್ಥಿ ಸಂಸತ್ತು ಉದ್ಘಾಟನೆಗೊಂಡಿದೆ. ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಜೊತೆಗೆ ಮೊದಲ ಸಂಸತ್ ಕಲಾಪ ನಡೆದಿದೆ. ಚಲನಚಿತ್ರ ನಿರ್ಮಾಪಕ, ವಾಣಿಜ್ಯೋದ್ಯಮಿ, ರಾಜಕೀಯ ಧುರೀಣ ಸುಬ್ರಾಯ ವಾಳ್ಕೆ ಸಮಾರಂಭವನ್ನು ಉದ್ಘಾಟಿಸಿದ್ದು, ಮುಖ್ಯಾಧ್ಯಾಪಕ ಎನ್. ಆ. ಗಜು ಅಧ್ಯಕ್ಷತೆಯನ್ನು ವಹಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು