Wednesday, January 22, 2025
ರಾಜಕೀಯಸುದ್ದಿ

ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷವಾದ ಪೂಜೆ ಸಲ್ಲಿಸಿದ ಯಡಿಯೂರಪ್ಪ – ಕಹಳೆ ನ್ಯೂಸ್

ನಂಜನಗೂಡು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಅಭಿಷೇಕ ಸಮಯಕ್ಕೆ ಆಗಮಿಸಿದ ಅವರು ಶ್ರೀಕಂಠೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ಶ್ರೀಕಂಠೇಶ್ವರನಿಗೆ ಅಭಿಷೇಕ ಸಲ್ಲಿಸಿ ಬಿಲ್ವಪತ್ರೆ, ಹೂವುಗಳನ್ನು ಸಮರ್ಪಿಸಿದರು. ಸುಮಾರು 25 ನಿಮಿಷಗಳ ಕಾಲ ಶಾಂತವಾಗಿ ದೇವರ ಮುಂದೆ ಕುಳಿತು ಧ್ಯಾನದಲ್ಲಿ ಮಗ್ನರಾಗಿ ವರ ಬೇಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ದೇಗುಲದ ಅರ್ಚಕರು ಪ್ರಸಾದ ನೀಡಿ ಶುಭ ಹಾರೈಸಿದರು. ದೇವಾಲಯದ ವತಿಯಿಂದ ಅವರಿಗೆ ಫಲತಾಂಬೂಲ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು