Tuesday, January 21, 2025
ಸುದ್ದಿ

ಮತ್ತೆ ಬರುತ್ತಿದೆ ಜನಪ್ರಿಯ ಕಾರ್ಯಕ್ರಮ ‘ಕನ್ನಡದ ಕೋಟ್ಯಧಿಪತಿ’ – ಕಹಳೆ ನ್ಯೂಸ್

ಈಗಾಗಲೇ 3 ಆವೃತ್ತಿಯ ಮೂಲಕ ಎಲ್ಲರ ಗಮನಸೆಳೆದಿರುವ ‘ಕನ್ನಡದ ಕೋಟ್ಯಧಿಪತಿ’ ಗೇಮ್ ಶೋ ಜೂನ್ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಮತ್ತೆ ಪುನಃ ನಟ ಪುನೀತ್‍ರಾಜಕುಮಾರ್ ಅವರು ನಿರೂಪಿಸುತ್ತಿರುವುದು ಮತ್ತೊಂದು ವಿಶೇಷ.

ಈ ಹಿಂದೆ ‘ಕನ್ನಡದ ಕೋಟ್ಯಧಿಪತಿ’ ಗೇಮ್ ಶೋ, ಚೆನ್ನೈನಲ್ಲಿ ಚಿತ್ರೀಕರಣವಾಗುತ್ತಿತ್ತು. ಆದರೆ, ಈ ಬಾರಿ ಕಲರ್ಸ್ ಕನ್ನಡ ವಾಹಿನಿ ಬೆಂಗಳೂರಲ್ಲೇ ಅದ್ಧೂರಿ ಸೆಟ್ ಹಾಕಿ, ವರ್ಣರಂಜಿತ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುನೀತ್ ಅವರು ನಡೆಸಿಕೊಡಲಿರುವ ಈ ಶೋ ಸಾಕಷ್ಟು ಕುತೂಹಲ ಕೆರಳಿಸಿದೆ. ಏಪ್ರಿಲ್ ಮೊದಲ ವಾರದಲ್ಲಿ ಸ್ಪರ್ಧಿಗಳ ಆಯ್ಕೆ ನಡೆದಿತ್ತು. ಪ್ರಶ್ನೆಗಳ ಮೂಲಕ ಅವರ ಜಾಣತನದ ಉತ್ತರವನ್ನು ಗಮನಿಸಿ, ಅತೀ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗಿದೆ. ಈ ಶೋಗೆ ಪ್ರತಿಕ್ರಿಯಿಸಿದ್ದ ಸಂಖ್ಯೆ ಲಕ್ಷಕ್ಕೂ ಅಧಿಕ. ಆ ಪೈಕಿ ಸಾವಿರಾರು ಜನರನ್ನು ಭೇಟಿ ಮಾಡಿ, ಅವರನ್ನು ಪರೀಕ್ಷಿಸಿ, ಆ ಪೈಕಿ ಒಂದಷ್ಟು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು