Tuesday, January 21, 2025
ಸುದ್ದಿ

ಬಿಗ್ ಬಜೆಟ್ ಸಿನೆಮಾದಲ್ಲಿ ಅಭಿನಯ ಚತುರ ಸತೀಶ್ ನೀನಾಸಂ – ಕಹಳೆ ನ್ಯೂಸ್

ಅಯೋಗ್ಯ ನಂತರ ಸ್ಟಾರ್ ಪಟ್ಟಕ್ಕೇರಿದ ನಟ ನೀನಾಸಂ ಸತೀಶ್ ‘ಬ್ರಹ್ಮಚಾರಿ’ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಬ್ರಹ್ಮಚಾರಿ ಈಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಅದೆ ಖುಷಿಯಲ್ಲಿ ಸತೀಶ್ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಭಿನಯ ಚತುರ ಸತೀಶ್ ಹೊಸ ಸಿನಿಮಾ, ಅವರ ಹುಟ್ಟುಹಬ್ಬದ ದಿನ ಸೆಟ್ಟೇರಲಿದೆ. ಅಂದ್ಹಾಗೆ ಸತೀಶ್ ಅವರ ಹುಟ್ಟುಹಬ್ಬ ಇದೇ ತಿಂಗಳು 20ಕ್ಕೆ. ಅಂದೇ ಅವರ ಹೊಸ ಸಿನಿಮಾ ಕೂಡ ಅನೌನ್ಸ್ ಆಗಲಿದೆ. ಸತೀಶ್ ಹೊಸ ಚಿತ್ರಕ್ಕೆ ದೇವರಾಜ್ ಪೂಜಾರಿ ಆಕ್ಷನ್ ಕಟ್ ಹೇಳಿದ್ದಾರೆ.
ಈ ಹಿಂದೆ ‘ಕಿನಾರೆ’ ಎನ್ನುವ ಸಿನಿಮಾ ಮಾಡಿದ್ದ ದೇವರಾಜ್ ಈಗ ಸತೀಶ್ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ವಿಭಿನ್ನವಾದ ಕಥೆ ಇದಾಗಿದೆಯಂತೆ. ವಿಶೇಷ ಅಂದ್ರೆ ಸತೀಶ್ ರೆಟ್ರೋ ಸ್ಟೈಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಅಂದ್ರೆ ಇದು ಬಹುದೊಡ್ಡ ಬಜೆಟ್‍ನ ಸಿನಿಮಾವಾಗಿರಲಿದೆಯಂತೆ. ಸತೀಶ್ ಇದುವರೆಗೂ ಕಾಣಿಸಿಕೊಂಡಿರದಂತಹ ಗೆಟಪ್ ನಲ್ಲಿ ಮಿಂಚಲಿದ್ದಾರಂತೆ. ಹುಟ್ಟುಹಬ್ಬದ ದಿನ ಬ್ರಹ್ಮಚಾರಿ ಚಿತ್ರದ ಟೀಸರ್ ರಿಲೀಸ್ ಮಾಡುವ ಜೊತೆಗೆ ಹೊಸ ಸಿನಿಮಾ ಕೂಡ ಸೆಟ್ಟೇರುತ್ತಿದೆ. ಹಾಗಾಗಿ ಈ ಬಾರಿಯ ಜನ್ಮದಿನ ಸತೀಶ್ ಪಾಲಿಗೆ ಮತ್ತಷ್ಟು ವಿಶೇಷವಾಗಿರುವುದರಲ್ಲಿ ಅನುಮಾನವೆ ಇಲ್ಲ.