ವೃದ್ದರೋರ್ವರನ್ನು ವೃದ್ದಾ ಆಶ್ರಮಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್ – ಕಹಳೆ ನ್ಯೂಸ್
ಬಂಟ್ವಾಳ: ದುಡಿಯಲು ಶಕ್ತಿಯಿಲ್ಲ, ತನ್ನವರು ಯಾರೂ ಇಲ್ಲ, ಒಂದೊತ್ತಿನ ಊಟಕ್ಕೂ ಇನ್ನೊಬ್ಬರ ಬಳಿ ಕೈ ಚಾಚುವ ಸನ್ನಿವೇಶ. ಅರೆಬರೆ ಬಟ್ಟೆ, ದೇವಸ್ಥಾನ, ಮಠ, ಮಂದಿರ ಚರ್ಚ್‍ಗಳೇ ಇವರ ವಾಸಸ್ಥಾನ. ಊರೂರು ಸುತ್ತಿ ಬಸವಳಿದ ವೃದ್ದರೋರ್ವರನ್ನು ವೃದ್ದಾ ಆಶ್ರಮಕ್ಕೆ ಸೇರಿಸಿ ಬಂಟ್ವಾಳ ನಗರ ಪೊಲೀಸ್ ಎಸ್ ಐ ಚಂದ್ರಶೇಖರ್ ಮಾನವೀಯತೆ ಮೆರೆದಿದ್ದಾರೆ.
ಸುಮಾರು 20 ದಿನಗಳಿಂದ ಬಂಟ್ವಾಳ ನಗರದ ಸುತ್ತಮುತ್ತಲ ದೇವಸ್ಥಾನ, ಚರ್ಚ್, ಬಸ್ಸುನಿಲ್ದಾಣಗಳೇ ಅಶೋಕ್ ನಾಯಕ್ ಅವರ ಸೂರಾಗಿತ್ತು. ಈ ವಿಚಾರವನ್ನು ಸಾರ್ವಜನಿಕರು ಎಸ್.ಐ. ಚಂದ್ರಶೇಖರ್ ಅವರ ಗಮನಕ್ಕೆ ತಂದರು. ಎಸ್. ಐ. ಅವರು ಸಿಬ್ಬಂದಿಗಳ ಜೊತೆ ಸೇರಿ ಅವರನ್ನು ಠಾಣೆಗೆ ಕರೆಸಿಕೊಂಡು ಬಂದು ವಿಚಾರಣೆ ನಡೆಸಿದಾಗ ಉಡುಪಿಯ ಅಂಬಲಪಾಡಿಯವರು ಎಂದು ತಿಳಿದು ಬಂದಿದೆ. ಹಾಗು ಅಶೋಕ್ ಅವರು ಪ್ರಾಯಸ್ಥರಾಗಿದ್ದು, ತನಗೆ ಯಾರೂ ಇಲ್ಲವೆಂದು ಹೇಳಿಕೊಂಡಿದ್ದಾರೆ.
ಅಶೋಕ್ ಅವರ ಪತ್ನಿ ಸರಸ್ವತಿ ಸುಮಾರು 26 ವರ್ಷಗಳ ಹಿಂದೆ ನಿಧನ ಹೊಂದಿದ್ದರು ಒರ್ವ ಮಗನನ್ನು ಸಾಕುತ್ತಾ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು. ದಿನ ಕಳೆದಂತೆ ಮಗ ತಂದೆಯನ್ನು ದೂರ ಮಾಡಿದ್ದಾನೆ ಎಂದು ತಿಳಿಸಿದರು. ಅ ಬಳಿಕವೂ ಇವರು ಕೂಲಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದರು . ಆದರೆ ಇತ್ತೀಚಿಗೆ ದುಡಿಯಲು ಶಕ್ತಿಯಿಲ್ಲದ ಕಾರಣ ಅಶೋಕ್ ನಾಯಕ್ ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಿದ್ದರು. ಕಳೆದ ಕೆಲದಿನಗಳಿಂದ ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಆದರೆ ಮಳೆ ಬಾರದೆ ಧರ್ಮಸ್ಥಳದಲ್ಲಿ ನೀರಿನ ಕೊರತೆಯಾದಾಗ ಇವರು ಬಂಟ್ವಾಳದ ಕಡೆ ಬಂದಿದ್ದರು.
ಎಸ್.ಐ. ಅವರು ಬಟ್ಟೆ ಬರೆ ನೀಡಿ ಅಶೋಕ ನಾಯಕ ಅವರನ್ನು ಸ್ನೇಹಾಲಯ ಮಂಜೇಶ್ವರ ವೃದ್ದಾ ಆಶ್ರಮಕ್ಕೆ ಕಳುಹಿಸಿಕೊಟ್ಟರು. ಪೊಲೀಸರು ಕಳ್ಳರನ್ನು ಹಿಡಿಯುದು ಮಾತ್ರವಲ್ಲದೆ, ಸಾಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ ಎಂಬುವುದು ಶ್ಲಾಘನೀಯ.