Monday, January 20, 2025
ಕ್ರೀಡೆ

ಅಂದು ಟಿವಿ ಒಡೆದು ಹಾಕುತ್ತಿದ್ದವರಿಗೆ ಈಗ ತಂಡವೇ ಬ್ಯಾನ್ ಆಗಬೇಕಂತೆ! – ಕಹಳೆ ನ್ಯೂಸ್

during the 4th One Day International match between Pakistan and New Zealand at Sheikh Zayed Stadium on December 17, 2014 in Abu Dhabi, United Arab Emirates.

ಭಾರತದ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಬ್ಯಾನ್ ಮಾಡುವಂತೆ ಕೋರ್ಟ್ ಗೆ ವ್ಯಕ್ತಿಯೊಬ್ಬರು ಅರ್ಜಿ ಹಾಕಿದ್ದಾರೆ. ಅಚ್ಚರಿ ಎಂದರೆ ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಕೂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಹೀರೋಗಳಾಗಿದ್ದ ಪಾಕಿಸ್ತಾನಿ ಕ್ರಿಕೆಟಿಗರು ಇದೀಗ ಪಾಕಿಸ್ತಾನದ ಅಭಿಮಾನಿಗಳಿಗೆ ಅಕ್ಷರಶಃ ವಿಲನ್‍ಗಳಾಗಿದ್ದಾರೆ. ಭಾರತದ ವಿರುದ್ಧ ಸೋಲನ್ನು ಜೀರ್ಣಿಸಿಕೊಳ್ಳಲಾಗದ ಕೆಲ ‘ವಿರೋಚಿತ’ ಅಭಿಮಾನಿಗಳು ಹಿಂದೆಲ್ಲ ಮನೆಯಲ್ಲಿನ ಟಿವಿ, ರೇಡಿಯೋಗಳನ್ನು ಒಡೆದು ಹಾಕುತ್ತಿದ್ದರು ಆದರೆ ಈಗ ತಮ್ಮದೇ ಕ್ರಿಕೆಟಿಗರನ್ನು ನಿಷೇಧಿಸುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಕ್ತಿಯೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡ ಹಾಗೂ ಆ ತಂಡವನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯನ್ನು ಕೂಡಲೇ ನಿಷೇಧಿಸುವಂತೆ ಗುಜ್ರನ್ ವಾಲಾ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.

ಇನ್ನು ಅರ್ಜಿ ಸ್ವೀಕರಿಸಿರುವ ಕೋರ್ಟ್ ಈ ಸಂಬಂಧ ಪಿಸಿಬಿ ಮತ್ತು ಆಯ್ಕೆ ಸಮಿತಿಗೆ ನೋಟಿಸ್ ಕೂಡ ಜಾರಿ ಮಾಡಿದೆ. ಒಟ್ಟಾರೆ ಪಾಕಿಸ್ತಾನದ ವಿರುದ್ಧದ ಭಾರತದ ಗೆಲುವು ಪಾಕಿಸ್ತಾನ ಕ್ರಿಕೆಟ್ ವಲಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದ್ದು, ಅಭಿಮಾನಿಗಳ ಈ ಹೈಡ್ರಾಮ ಇನ್ನು ಅದೆಲ್ಲಿಗೆ ಮುಟ್ಟುತ್ತದೆಯೋ ಕಾದು ನೋಡಬೇಕಿದೆ