Monday, January 20, 2025
ಸುದ್ದಿ

ಮುಲ್ಕಿ ಪೊಲೀಸರಿಂದ ರಾಜ್ಯ, ಅಂತರಾಜ್ಯ ವಾಹನ, ಮನೆ ಮತ್ತು ದೈವಸ್ಥಾನ ಕಳ್ಳರ ಬಂಧನ – ಕಹಳೆ ನ್ಯೂಸ್

ರಾಜ್ಯ, ಅಂತರಾಜ್ಯ ವಾಹನ, ಮನೆ ಮತ್ತು ದೈವಸ್ಥಾನ ಕಳ್ಳರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸವಾದ್, ಮೊಹಮ್ಮದ್ ಸಿನಾನ್ ಎಂದು ಶಂಕಿಸಲಾಗಿದೆ. ಇವರಿಂದ ಗೋವಾ ರಾಜ್ಯದಲ್ಲಿ ಕಳವು ಮಾಡಿದ ನೋಂದಣಿ ಸಂಖ್ಯೆ ಅಳವಡಿಸದ ಪಾರ್ಚುನರ್ ಕಾರು ಹಾಗೂ ನೊಂದಣಿ ಸಂಖ್ಯೆ ಅಳವಡಿಸದ ರಾಯಲ್ ಎನ್ ಪೀಲ್ಡ್ ಬುಲೆಟ್ ಬೈಕ್-2 ನ್ನು ವಶಪಡಿಸಿಕೊಂಡಿದ್ದಾರೆ. ಅಂತೆಯೇ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಚಿಲ್ಲರೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ ಟಾಟಾ ಪಿಕ್ ಅಪ್ ನ ನೊಂದಣಿ ಸಂಖ್ಯೆ ಕೆಎ 19 ಎಎ 8637 , ಡಿಸ್ಕವರ್ ಬೈಕ್ ನಂಬ್ರ ಕೆ ಎ 19 ಇಮ್ 795 ಮತ್ತು ಪಲ್ಸರ್ ಬೈಕ್ ನಂಬ್ರ ಕೆ ಎ 19 ಇಕೆ 7981 ಹಾಗೂ ಆರೋಪಿಗಳಿಂದ 3 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 40 ಲಕ್ಷ ಆಗಿರುತ್ತದೆ.

ಜಾಹೀರಾತು

ಜಾಹೀರಾತು
ಜಾಹೀರಾತು