Monday, January 20, 2025
ಸಿನಿಮಾ

ಮನೆ ಮಾರಾಟದ ಮೂಲಕ ಮತ್ತೆ ಬಂದ ಮೀಟೂ ತಾರೆ – ಕಹಳೆ ನ್ಯೂಸ್

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಇದೀಗ ಮನೆ ಮಾರಾಟಕ್ಕಿದೆ ಅಂತ ಮತ್ತೆ ಬಂದಿದ್ದಾರೆ.

ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಪಾತ್ರ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಹಾರರ್-ಕಾಮಿಡಿ ಡ್ರಾಮಾ ಎಂದು ಹೇಳಿರುವ ನಿರ್ದೇಶಕರು ಇದಕ್ಕಾಗಿ ದೊಡ್ಡ ಹಾಸ್ಯ ಕಲಾವಿದರನ್ನೇ ಕೂಡಿ ಹಾಕಿದ್ದಾರೆ. ಹೌದು ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ, ರವಿಶಂಕರ್ ಗೌಡ, ಮತ್ತು ಗಿರಿ ಹಾಸ್ಯ ಕಲಾವಿದರು ನಟಿಸಿದ್ದಾರೆ. ಜುಲೈನಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದೆ.

ಚಿತ್ರವನ್ನು ಎಸ್ ವಿ ಬಾಬು ನಿರ್ಮಿಸುತ್ತಿದ್ದಾರೆ. ಅಭಿಮನ್ ರಾಯ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು ಸುರೇಶ್ ಬಾಬು ಅವರ ಛಾಯಾಗ್ರಹಣವಿದೆ.