Monday, January 20, 2025
ಸಿನಿಮಾ

ಬ್ಯಾಕ್ ಟು ಬ್ಯಾಕ್ ಖಾಕಿ ಗೆಟಪ್‍ನಲ್ಲಿ ರಮೇಶ್ ಅರವಿಂದ್ – ಕಹಳೆ ನ್ಯೂಸ್

ರಮೇಶ್ ಅರವಿಂದ್ ಅಭಿನಯಿಸುತ್ತಿರುವ ಹೊಸ ಚಿತ್ರದ ‘100’ ಎಂಬುದಾಗಿದೆ. ಇಂದು ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಲಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಹಾಡುಗಳನ್ನು ಹೊರತುಪಡಿಸಿ, ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿರುವ, ರಮೇಶ್ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ರಮೇಶ್ ಡಿಟೆಕ್ಟೀವ್ ಪಾತ್ರ ಮಾಡಿದ್ದಾರೆ, ಜೊತೆಗೆ ರಾಧಿಕಾ ಕುಮಾರಸ್ವಾಮಿ ಜತೆ ತೆರೆಹಂಚಿಕೊಂಡಿರುವ ‘ಭೈರಾದೇವಿ’ ಸಿನಿಮಾದಲ್ಲಿ ಅವರಿಗೆ ಪೊಲೀಸ್ ಗೆಟಪ್ ಇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ‘100’ ಮೂಲಕ ಮತ್ತೆ ಖಾಕಿ ಖದರ್‍ ನಲ್ಲಿ ಮಿಂಚಲಿದ್ದಾರೆ ರಮೇಶ್. ಇನ್ನು ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. ಈಗಾಗಲೇ ಡಿಂಪಲ್ ಕ್ವೀನ್ ರಚಿತಾ ರಾಮ್ ಆಯ್ಕೆ ಖಚಿತವಾಗಿದೆ. ಮೂಲಗಳ ಪ್ರಕಾರ, ‘ಜೋಷ್’ ಖ್ಯಾತಿಯ ನಟಿ ಪೂರ್ಣಾ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು