Tuesday, January 21, 2025
ಸುದ್ದಿ

ಡಿಎಲ್ ನಿಯಮ ಸಡಿಲ, ಉದ್ಯೋಗಾವಕಾಶ ಹೆಚ್ಚಳ : ಯುವಕರಿಗೆ ಕೇಂದ್ರದಿಂದ ಸಿಹಿ ಸುದ್ದಿ – ಕಹಳೆ ನ್ಯೂಸ್

ನವದೆಹಲಿ : ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇರುವ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ತೆಗೆದು ಹಾಕಿ ಉದ್ಯೋಗವಕಾಶ ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಮೋಟಾರು ವಾಹನ ನಿಯಮದ ಪ್ರಕಾರ ಸಾರಿಗೆ ವಾಹನ ಚಲಾಯಿಸುವವರು 8ನೇ ತರಗತಿ ಪಾಸ್ ಆಗಿರುವುದು ಕಡ್ಡಾಯವಾಗಿದೆ. ಮೋಟಾರು ವಾಹನ ಕಾಯ್ದೆ ತಿದ್ದುಪಡಿ ತರಲು ಸಾರಿಗೆ ಸಚಿವಾಲಯ ಮುಂದಾಗಿದ್ದು, ಕರಡು ಅಧಿಸೂಚನೆ ಸದ್ಯದಲ್ಲೇ ಪ್ರಕಟವಾಗಲಿದೆ.
ವಾಹನ ಚಾಲನಾ ಪರವಾನಿಗೆ ಪಡೆಯಲು ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ತೆಗೆದುಹಾಕುವುದರಿಂದ ಯುವಕರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗ ಅವಕಾಶಗಳು ಸಾರಿಗೆ ಮತ್ತು ಸಾಗಾಣಿಕೆ ವಲಯದಲ್ಲಿ ಸಿಗಲಿವೆ. ಸುಮಾರು 22 ಲಕ್ಷ ಚಾಲಕರ ಕೊರತೆ ಇದ್ದು, ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನಿಷ್ಟ ವಿದ್ಯಾರ್ಹತೆಯನ್ನು ರದ್ದುಪಡಿಸಲಿದ್ದು ಕಡ್ಡಾಯವಾಗಿ ತರಬೇತಿ ಮತ್ತು ಕೌಶಲ ಪರೀಕ್ಷೆಗಳಿಗೆ ಚಾಲಕರು ಒಳಪಡಬೇಕಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.

ರಸ್ತೆ ಸೂಚನಾಫಲಕ ಓದುವ ಸಾಮರ್ಥ್ಯ ಚಾಲಕರಿಗೆ ಇರಬೇಕು ಎಂಬ ಉದ್ದೇಶದಿಂದ 8 ನೇ ತರಗತಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ.