Monday, January 20, 2025
ಸಿನಿಮಾಸುದ್ದಿ

ಹಿರಿಯ ರಂಗಕರ್ಮಿ, ಕೃಷಿಕ ಡಿ.ಕೆ ಚೌಟ ನಿಧನ – ಕಹಳೆ ನ್ಯೂಸ್

ಕೃಷಿ ಹಿನ್ನೆಲೆಯಿಂದ ಬಂದು, ಪ್ರಗತಿಪರ ಕೃಷಿಕರಾಗಿ ಮುಂದುವರಿಯುತ್ತಲೇ ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಿರಿಯ ಜೀವಿ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ ಚೌಟ ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.

ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ರಚಿಸಿದ ಮಿತ್ತಬೈಲ್ ಯಮುನಕ್ಕ, ಕರಿಯ ವಜ್ಜೆರೆನ ಕಥೆಕುಲು ತುಳು ಕಾದಂಬರಿಗಳು, ಪಿಲಿಪತ್ತಿ ಗಡಸ್, ಮೂಜಿ ಮುಟ್ಟು ಮೂಜಿ ಲೋಕ, ಪಾಟ್ ಪಜ್ಜೆಲು ಎಂಬ ತುಳು ನಾಟಕಗಳು ವ್ಯಾಪಕ ಜನಮೆಚ್ಚುಗೆ ಗಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ಕಾಸರಗೋಡಿನ ಮಂಜೇಶ್ವರ ಸಮೀಪದ ಮೀಯಪದವಿನವರಾದ ಡಿ.ಕೆ ಚೌಟರು ಬೆಂಗಳೂರಿನ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಸಮ್ಮಾನ-ಗೌರವಗಳು ಅವರಿಗೆ ಸಂದಿವೆ.

ಡಿ.ಕೆ. ಚೌಟ ಅವರ ದೇಹವನ್ನು ಸಂಜೆ ಏಳು ಗಂಟೆಯ ತನಕ ಬಸವೇಶ್ವರ ನಗರದ ಅವರ ಮನೆಯಲ್ಲಿ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.