ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋ ಉಗ್ರರು ಮತ್ತೆ ರಕ್ತ ಹರಿಸಿದ್ದು, ಸಮಾಜವಾದಿ ಪಕ್ಷದ ನಾಯಕ ಸಂತೋಷ್ ಪೂನಂ ಅವರನ್ನು ಹತ್ಯೆ ಮಾಡಿದ್ದಾರೆ. ಅವರ ಮೃತದೇಹ ಬುಧವಾರ ಪತ್ತೆಯಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಸೋಲು ಅನುಭವಿಸಿದ್ದರು. ಅವರನ್ನು ನಕ್ಸಲರು ಮಂಗಳವಾರ ಸಂಜೆ ಅಪಹರಿಸಿದ್ದರು. ಅವರ ಕುಟುಂಬ ಸದಸ್ಯರು ನಕ್ಸಲ್ ಮುಖಂಡರನ್ನು ಭೇಟಿಯಾಗಿ ಸುರಕ್ಷಿತ ಬಿಡುಗಡೆ ಮಾಡುವಂತೆ ಕೋರಿದ್ದರೂ ಪ್ರಯಾಜನವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸಂತೋಷ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಮಾರಿಮಲ್ಲ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಬಹಳ ಸಮಯದಿಂದ ಸಂತೋಷ್ ಪೂನಂ ಅವರು ನಕ್ಸಲರ ಟಾರ್ಗೆಟ್ ಆಗಿದ್ದರು. ಗುತ್ತಿಗದಾರರಾಗಿದ್ದ ಅವರು ಸ್ವಲ್ಪ ಕಾಲ ಸಮಾಜವಾದಿ ಪಕ್ಷದ ಬಿಜಾಪುರ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದರು.