Sunday, November 24, 2024
ಸುದ್ದಿ

ಸರಸ್ವತೀ ವಿದ್ಯಾಲಯ ಪ್ರೌಢ ಮತ್ತು ಪದವಿಪೂರ್ವ ವಿಭಾಗಗಳ ಪ್ರವೇಶೋತ್ಸವ: “ಶಿಕ್ಷಣ ಕೇಂದ್ರಗಳು ದೇವಾಲಯಕ್ಕೆ ಸಮ”- ಶ್ರೀ ದಿನೇಶ್ ಮೆದು – ಕಹಳೆ ನ್ಯೂಸ್

ದಿನಾಂಕ 19.06.2019 ರಂದು ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಲಯದ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಎ.ಪಿ.ಎಂ.ಸಿ ಯ ಅಧ್ಯಕ್ಷರಾದ ಶ್ರೀ ದಿನೇಶ್ ಮೆದು ಇವರು ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು “ಶಿಕ್ಷಣ ಕೇಂದ್ರಗಳು ದೇವಾಲಯಕ್ಕೆ ಸಮ. ಸಮಾಜದಲ್ಲಿ ಉತ್ತಮ ನಾಗರೀಕನಾಗಿ ಬಾಳಲು ಸಂಸ್ಕಾರ ಶಿಕ್ಷಣ ಕೇಂದ್ರಗಳ ಮೂಲಕ ಸಿಕ್ಕಾಗ ವಿದ್ಯಾರ್ಥಿಗಳು ಮುಂದೆ ಸಮಾಜಮುಖಿಯಾಗಿ ಜೀವಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಅತಿಥಿ ಸುಬ್ರಹ್ಮಣ್ಯದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ತಾಳ್ಮೆ, ಶ್ರದ್ದೆ ಮುಂತಾದ ಗುಣಗಳು ಅತಿ ಅಗತ್ಯ. ವಿದ್ಯಾರ್ಥಿ ದೆಸೆಯಲ್ಲಿ ಆ ಕಡೆ ಹೆಚ್ಚಿನ ಗಮನ ಅಗತ್ಯ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸುಲ್ಕೇರಿ ಶ್ರೀರಾಮ ಶಾಲೆಯ ಕೋಶಾಧಿಕಾರಿ ನೊಚ್ಚ ಪ್ರಕಾಶ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿನ ನಕಾರಾತ್ಮಕ ಅಂಶಗಳ ಕಡೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅದನ್ನು ಸವಾಲಾಗಿ ಸ್ವೀಕಾರ ಮಾಡಿ ನಾವು ಸಕಾರಾತ್ಮಕವಾಗಿ ಮುನ್ನಡೆಯಬೇಕು, ನಿನ್ನ ಜವಬ್ದಾರಿಯನ್ನು ನೀನು ನಿರ್ವಹಿಸು ಆಗ ನೀನು ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಶ್ರೀ ಕೃಷ್ಣ ಶೆಟ್ಟಿ ಕಡಬ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀ ರವಿರಾಜ ಶೆಟ್ಟಿ ಕಡಬ ಮಾತನಾಡಿ ಸಂಸ್ಥೆಯ ಏಳಿಗೆಗೆ ಬೆನ್ನುಲುಬಾಗಿ ನಿಂತ ಸಹೃದಯಿ ದಾನಿಗಳನ್ನು ಸ್ಮರಿಸಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ವೆಂಕಟ್ರಮಣ ರಾವ್ ಮಂಕುಡೆ ಪ್ರಸ್ತಾವನೆಗೈದರು.

ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹೋಮಕುಂಡಕ್ಕೆ ಹವಿಸ್ಸನ್ನು ಅರ್ಪಿಸಿ, ಅತಿಥಿಗಳಿಂದ ಸಿಹಿ ಸ್ವೀಕರಿಸಿ, ತಿಲಕಧಾರಣೆ ಮಾಡಿಸಿಕೊಂಡು ಆಶೀರ್ವಾದ ಪಡೆದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಸ್ವಾಗತಿಸಿ, ದೈಹಿಕ ಶಿಕ್ಷಕ ಲಕ್ಮೀಶ ಗೌಡ ವಂದಿಸಿ, ಉಪನ್ಯಾಸಕಿ ಅಖಿಲಾ ನಿರೂಪಿಸಿದರು.