Sunday, November 24, 2024
ಸುದ್ದಿ

ವೆನ್ಲಾಕ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಶ್ರೀ ರಾಮಸೇನಾ ವತಿಯಿಂದ ಪ್ರತಿಭಟನೆ : ಕಹಳೆ ನ್ಯೂಸ್

ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ವೈದ್ಯರ ನಿರ್ಲಕ್ಷ್ಯತೆಯ ಹಾಗೂ ಹಿಂದೂ ಕಾರ್ಯಕರ್ತರನ್ನು ಜೈಲಿಗಟ್ಟಿದ ಬಗ್ಗೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಶ್ರೀ ರಾಮಸೇನಾ ವತಿಯಿಂದ ಪ್ರತಿಭಟನೆ ನಡೆಯಿತು. ಎರಡು ದಿನಗಳ ಹಿಂದೆ ಬೈಕ್ ಅಪಘಾತವೊಂದು ನಡೆದಿದ್ದು, ಗಾಯಾಳುವನ್ನು ಸ್ನೇಹಿತರುಗಳು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಸಂದರ್ಭದಲ್ಲಿ ಗಾಯಾಳುವಿನ ಬಗ್ಗೆ ಯಾವುದೇ ವೈದ್ಯರಾಗಲಿ ಅಥವಾ ಸಿಬ್ಬಂದಿಗಳಾಗಲಿ ನಿಗಾ ವಹಿಸದೆ ಇರುವುದು ಅತ್ಯಂತ ನೋವಿನ ಸಂಗತಿ. ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸಾಮಾಜಿಕ ಜಾಲತಾಣದ ಮೂಲಕ ಅನ್ಯಾಯದ ವಿರುದ್ಧ ಜನರಿಗೆ ತಿಳಿಯುವಂತೆ ಅಲ್ಲಿನ ಮಾಹಿತಿಗಳನ್ನು ರವಾನಿಸಿದ ಬಗ್ಗೆ ನಮ್ಮ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಜೈಲಿಗೆ ತಳ್ಳಿದ್ದು ಸರಿಯಲ್ಲ ಎಂಬುದು ಸಂಘಟನೆಯ ಅಭಿಪ್ರಾಯವಾಗಿದೆ.  ಒಬ್ಬ ಜವಾಬ್ದಾರಿ ಕಾರ್ಯಕರ್ತನಾಗಿ ರೋಗಿಗಳಿಗೆ ತಕ್ಷಣಕ್ಕೆ ಸಿಗಬೇಕಾದ ಸವಲತ್ತುಗಳನ್ನು ವಂಚಿಸುತ್ತಿದ್ದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯಪಡಿಸುವುದು ನಾಗರಿಕರ ಕರ್ತವ್ಯ ಎಂಬುದು ನಮ್ಮ ಭಾವನೆ. ಈಗಾಗಲೇ ವೆನ್ಲಾಕ್‍ನ ವೈದ್ಯಾಧಿಕಾರಿ ಡಾ| ರಾಜೇಶ್ವರಿಯ ಬಗ್ಗೆ ಅಪಸ್ವರವಿದ್ದು, ಹಲವಾರು ಸಾಮಾಜಿಕ ಸಂಘಟನೆಗಳು ಇವರ ವಿರುದ್ಧ ಧ್ವನಿ ಎತ್ತಿರುವುದು ಕಂಡು ಬರುತ್ತಿದೆ.ಈ ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಶ್ರೀ ರಾಮಸೇನಾ ವಿಭಾಗ ಅಧ್ಯಕ್ಷ ಜೀವನ್ ನೀರುಮಾರ್ಗ, ವಿಭಾಗ ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ಅಮ್ಟಾಡಿ, ಜಿಲ್ಲಾದ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಜಿಲ್ಲೆಯ ವಕ್ತಾರ ಪ್ರಸಾದ್ ಉಜಿರೆ, ಉಪಾದ್ಯಕ್ಷ ಅರುಣ್ ಶೆಟ್ಟಿ ಕದ್ರಿ, ಕಾರ್ಯದರ್ಶಿ ಹರೀಶ್ ಬೊಕ್ಕಪಟ್ಣ, ವೆಂಕಟೇಶ್ ಪಡಿಯಾರ್ ಮತ್ತಿತ್ತರರು ಉಪಸ್ಥಿತರಿದ್ದರು.