Tuesday, January 21, 2025
ಸುದ್ದಿ

ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ – ಜಲಸಂಪನ್ಮೂಲ ಸಚಿವ ಡಿಕೆಶಿ – ಕಹಳೆ ನ್ಯೂಸ್

ನವದೆಹಲಿ : ಮೈತ್ರಿ ಸರ್ಕಾರ ರಚನೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಿರುವ ವಿಚಾರ. ಅದು ಇತ್ತೀಚೆಗೆ ತಾರಕಕ್ಕೇರಿದೆ. ಕಾಂಗ್ರೆಸ್ ಪಕ್ಷದ ಮುಖ್ಯ ವಾಹಿನಿಯಲ್ಲಿದ್ದ ಕೆಲ ನಾಯಕರನ್ನು ಪಕ್ಷ ಕಡೆಗಣಿಸುತ್ತಿದೆ ಎಂಬುದು ಕೆಲ ನಾಯಕರ ಅಸಾಮಾಧಾನ. ಇದೀಗ ಶಾಸಕ ರೋಷನ್ ಬೇಗ್ ಅವರನ್ನು ಅಮಾನತ್ತು ಮಾಡುವವರೆಗೆ ಬಂದು ನಿಂತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಡಿಕೆಶಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಅವರಿಗೆ ಗೌರವ ಕೊಡಲೇಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ರೋಷನ್ ಅವರ ಅಮಾನತು ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ದೆಹಲಿಯಲ್ಲಿ ಮಾತನಾಡಿದ ಅವರು ರೋಷನ್ ಬೇಗ್ ಅವರ ಅಮಾನತು ವಿಚಾರದ ಕುರಿತು ಪ್ರಶ್ನಿಸಿದಾಗ, ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಬೆಳಗ್ಗೆ ಯಾರೋ ಎಐಸಿಸಿಯಲ್ಲಿ ಮಾಹಿತಿ ನೀಡಿದರು. ಈ ಬಗ್ಗೆ ಕೇಳಿ ಹೇಳುತ್ತೇನೆ ಎಂದರು. ನಾವೆಲ್ಲ ಗಾಂಧಿ ಕಟುಂಬಕ್ಕೆ, ಪಕ್ಷಕ್ಕೆ ನಿಷ್ಠೆ ಉಳ್ಳವರು. ಯಾವತ್ತೂ ಒಂದು ಪಕ್ಷ ಅಂದಾಗ ಅಲ್ಲಿ ವ್ಯಕ್ತಿ ಪೂಜೆಗಿಂತ ಪಕ್ಷದ ಪೂಜೆ ಮುಖ್ಯವಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿದ್ದರಾಮಯ್ಯ ಸಿಎಲ್ಪಿ ನಾಯಕ, ಪಕ್ಷದ ಹಿರಿಯ ಮುಖಂಡರು, ಹಾಗಾಗಿ ಅವರಿಗೆ ಗೌರವ ಕೊಡಲೇಬೇಕು . ಕಾಂಗ್ರೆಸ್ ಶಾಸಕರು ಸೇರಿದಂತೆ ಎಲ್ಲರಿಗೂ ಅವರವರಿಗೆ ಕೊಡಬೇಕಾದ ಗೌರವ ನೀಡಿದೆ ಎಂದರು. ನನಗೆ ಈ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಹಾಗೆ ಈ ಬಗ್ಗೆ ಏನೂ ಮಾತನಾಡಬಾರುದು ಎಂದಿದ್ದಾರೆ, ಹಾಗಾಗಿ ನಾನು ಜಾಸ್ತಿ ಮಾತನಾಡುವುದಿಲ್ಲ ಎಂದರು.