Monday, January 20, 2025
ಸಿನಿಮಾಸುದ್ದಿ

ಲವ್ವಲ್ಲಿ ಬಿದ್ಲಾ ತೆಂಡುಲ್ಕರ್ ಮಗಳು ಸಾರಾ..? : ಬ್ಯೂಟಿಫುಲ್ ಸಾರಾಗೆ ಬೌಲ್ಡ್ ಆದ ಹುಡುಗ ಯಾರು..? – ಕಹಳೆ ನ್ಯೂಸ್

ಮುಂಬೈ: ಪ್ರೀತಿ ಯಾರಿಗೆ ಹುಟ್ಟಲ್ಲ ಹೇಳಿ.. ಅದರಲ್ಲೂ ಹದಿಹರೆಯದ ಹುಡುಗ ಹುಡುಗಿಯರಂತೂ ವಾಸ್ತವನೇ ಮರೆತಿರುತ್ತಾರೆ. ಬಡವ, ಶ್ರೀಮಂತ, ಬಣ್ಣ, ಜಾತಿ ಗೇ ಮೀರಿದ್ದು ಈ ಪ್ರೇಮ. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಗಳೂ ಸಾರಾ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಅಷ್ಟಕ್ಕೂ ಈ ಚೆಂದುಳ್ಳಿ ಚೆಲುವೆಯ ಮನ ಕದ್ದಿದ್ದು ಯಾರೂ..?

ಜಾಹೀರಾತು
ಜಾಹೀರಾತು
ಜಾಹೀರಾತು

ಶುಭ್ಮನ್ ಗಿಲ್.. ಈ ಹುಡುಗನ ಹೆಸರನ್ನು ಕ್ರಿಕೇಟ್ ಪ್ರೇಮಿಗಳು ಕೇಳಿಯೇ ಇರುತ್ತೀರಿ. ಅಂಡರ್ 19 ಕ್ರಿಕೆಟ್‍ನಲ್ಲಿ ತನ್ನ ಅದ್ಭುತ ಆಟದಿಂದ ಸುದ್ದಿಯಾದ ಪ್ರತಿಭಾನ್ವಿತ ಆಟಗಾರ. ನಂತರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ಗಿಲ್ ತನ್ನ ಆಟದಿಂದ ಗಮನ ಸೆಳೆದಿದ್ದರು. ಆದೇ ಗಿಲ್‍ಗೀಗ ಕ್ರಿಕೆಟ್ ದೇವರ ಮಗಳ ಮೇಲೇ ಪ್ಯಾರ್‍ಗೆ ಆಗ್ಬಿಟ್ಟೈತೆ ಅನ್ನೋ ಸುದ್ದಿ ಹರಿದಾಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಜಾಬ್ ಮೂಲದ ಈ ಬಲಗೈ ಆಟಗಾರ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಅದೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗಳ ಜೊತೆ ! ಹೀಗಂತ ಹಿಂದೊಮ್ಮೆ ಈ ಸುದ್ದಿ ಕೇಳಿ ಬಂದಿತ್ತು. ಈ ಊಹಾಪೋಹಕ್ಕೆ ಪುಷ್ಠಿ ಸಿಕ್ಕುವಂತ ಘಟನೆ ಇದೀಗ ಮತ್ತೊಂದು ನಡೆದಿದೆ.

ಶುಭ್ಮನ್ ಗಿಲ್ ಇತ್ತೀಚೆಗಷ್ಟೆ ಹೊಚ್ಚ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿ, ಕಾರಿನೊಂದಿಗೆ ನಿಂತ ಪಿಕ್‍ವೊಂದನ್ನು ಇನ್ಸ್ಟಾಗ್ರಾಮ್‍ನಲ್ಲಿ ಹರಿಬಿಟ್ಟಿದ್ದರು. ಈ ಫೋಟೋಗೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ‘ಶುಭಾಶಯಗಳು’ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶುಭ್ಮನ್ ಕೂಡಾ ‘ಥ್ಯಾಂಕ್ಸ್ ಅ ಲಾಟ್’ ಎಂದು ಮರು ಕಾಮೆಂಟ್ ಹಾಕಿದ್ದರು. ಇಷ್ಟೇ ಆಗಿದ್ದರೆ ಇದೇನು ಕಾಮನ್ ಅಂತಿದ್ವಿ.. ಆದರೆ ಇಲ್ಲಿಗೆ ನಿಂತಿದ್ದ ಶುಭಾಶಯಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದು ಟಿಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಗಿಲ್‍ರ ಥ್ಯಾಂಕ್ಸ್ ಅ ಲಾಟ್ ಕಾಮೆಂಟ್ ಗೆ ‘ಮೋಸ್ಟ್ ವೆಲ್ ಕಮ್ ಫ್ರಮ್ ಹರ್’ ಎಂದು ಕಮೆಂಟ್ ಹಾಕಿ ಅದಕ್ಕೊಂದು ಕಣ್ಣು ಮಿಟುಕಿಸುವ ಇಮೋಜಿ ಹಾಕಿದ್ದಾರೆ.

ಇಷ್ಟು ಸಾಕು ನೋಡಿ ನಮ್ಮ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗಕೆ. ಈಗ ಗಿಲ್ – ಸಾರಾ ನಡುವೆ ಏನೋ ನಡೆಯುತ್ತಿದೆ ಎಂದು ಓದುಗರೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿಬ್ಬರ ಮಧ್ಯೆ ಏನಿದೆ ಅನ್ನೋದಕ್ಕೆ ಅವರೇ ಉತ್ತರ ನೀಡಬೇಕು.