Monday, November 25, 2024
ಸುದ್ದಿ

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಟ್ಯೂಷನ್ ತರಗತಿಗಳಿಗೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಕಳೆದ 12 ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ತೊಡಗಿ ಅನುತ್ತೀರ್ಣರಾಗಿ ವಿದ್ಯಾಭ್ಯಾಸ ಮೊಟಕುಗೊಳಿಸುವತ್ತ ವಾಲಿರುವ ವಿದ್ಯಾರ್ಥಿಗಳಿಗೆ ಹೊಸದೊಂದು ಭರವಸೆ ಕಲ್ಪಿಸಿ ಬದುಕಿಗೆ ಹುರುಪು ತುಂಬುತ್ತಿದೆ ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್. ಪುಟ್ಟ ಹೆಜ್ಜೆಗಳೊಂದಿಗೆ ಕನಸು ಹೊತ್ತು ಇದೀಗ ಯಶಸ್ಸಿನತ್ತ ಮುಖ ಮಾಡಿ ರಾಜ್ಯದ ಅದೆಷ್ಟೋ ವಿದ್ಯಾರ್ಥಿಗಳಲ್ಲಿ ವಿದ್ಯಾ ಚೈತನ್ಯ ತುಂಬಿದೆ. ಟ್ಯೂಷನ್ ಸೆಂಟರ್ ಒಂದು ವಿಭಿನ್ನ ಶೈಲಿಯಲ್ಲಿ ಬೆಳೆಯುತ್ತಾ, ಭರವಸೆಯ ಬೆಳಕು ಚೆಲ್ಲುತ್ತಾ, ಇಡೀ ರಾಜ್ಯಕ್ಕೆ ಮಾದರಿಯಾಗುವುದೆಂದರೇ ಸಾಧನೆಯೇ ಸರಿ.

ಕಳೆದ 12ವರ್ಷಗಳಿಂದ ದೈನಂದಿನ ತರಗತಿಗಳ ಜೊತೆಗೆ ಹೊರಗಿನ ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಮಂದಹಾಸ ಮೂಡುವಲ್ಲಿ ಸಂಸ್ಥೆಯ ಪಾತ್ರ ಮಹತ್ತರವಾದುದು. ಕಳೆದ ಶೈಕ್ಷಣಿಕ ವರ್ಷ ಎಸ್.ಎಸ್.ಎಲ್.ಸಿ 2018-19ರ ಟ್ಯೂಷನ್ ವಿದ್ಯಾರ್ಥಿಗಳಾದ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೂಜಾಶ್ರೀ(586),

ಮಹಮ್ಮದ್ ಮಶೈಲ್ (548),

ಮಹಮ್ಮದ್ ಶಮೀಮ್ (506),

ರಮೀಜ್ ಅಲೀಶ್ (505),

ಅಬ್ದುಲ್ಲ ಅವೀಶ್(504),

ಹಾಗೂ 50ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಟ್ಯೂಷನ್ ವಾಣಿಜ್ಯ ವಿಭಾಗದಲ್ಲಿ

ಮಹಮ್ಮದ್ ನೌಫಲ್ (468),

ಜೀವಶ್ರೀ (465),

ಮಹಮ್ಮದ್ ಅಫ್ರನ್(423),

ಅಜ್ಮೀಯಾ (423),

ಪ್ರಸೀದಾ ಕೃಷ್ಣ (417)

ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯ ಜ್ಞಾನವಿಲ್ಲದ, ಕಲಿಕೆಯಲ್ಲಿ ಹಿಂದುಳಿದ ಮತ್ತು ಅನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಒಲವನು ಮೂಡಿಸಿ, ಅಭ್ಯಾಸ ನಡೆಸಲು ಅನುವು ಮಾಡಿಕೊಟ್ಟು ಅವರಿಗೆ ಭವ್ಯ ಭವಿಷ್ಯವನ್ನು ರೂಪಿಸುವುದೇ ನಮ್ಮ ಧ್ಯೇಯ. ಇದೀಗ 2019-20ನೇ ಸಾಲಿನ ದೈನಂದಿನ ತರಗತಿಗಳು ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನ ಟ್ಯೂಷನ್ ತರಗತಿಗಳು ಶೀಘ್ರವಾಗಿ ಆರಂಭಗೊಳ್ಳಲಿದೆ.

ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳ ತರಬೇತಿ ತರಗತಿಗಳು SSLC ಮತ್ತು CBSE ಪಠ್ಯಕ್ರಮಗಳಲ್ಲಿ ಲಭ್ಯವಿದೆ. ಹಾಗೂ ಪಿಯುಸಿಯಲ್ಲಿನ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಿಗೂ ತರಬೇತಿ ಲಭ್ಯವಿದ್ದು, ಪದವಿ ವಿದ್ಯಾರ್ಥಿಗಳಿಗೂ ಎಲ್ಲಾ ವಿಷಯಗಳಿಗೆ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳ ಸಮಯಕ್ಕನುಗುಣವಾಗಿ ಪ್ರತಿದಿನ ಸಾಯಂಕಾಲ ಹಾಗೂ ಶನಿವಾರ ಅಪರಾಹ್ನದ ನಂತರ ಹಾಗೂ ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೆ ತರಗತಿಗಳ ಲಭ್ಯವಿದೆ. ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.