Tuesday, January 21, 2025
ಸುದ್ದಿ

ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಅವಿನಾಶ್ ಜಾದವ್ – ಕಹಳೆ ನ್ಯೂಸ್

ಭಾರತ ದೇಶ ಮೊದಲು ಶಸ್ತ್ರ ಚಿಕಿತ್ಸಾ ವೈದ್ಯರಾದ ಶುಶ್ರುತರು ವೈದ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಂದು ವೈದ್ಯರು ಹಾಗೂ ಪ್ರಸ್ತುತ ಚಿಂಚೋಳ್ಳಿ ಶಾಸಕರಾದ ಡಾ ಅವಿನಾಶ್ ಜಾಧವ್‍ರವರು ಹೇಳಿದರು.

ಇವರು ಜೂ. 19ರಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಡಿ ನೀಡಿ ಮಾತನಾಡಿದ ಇವರು, ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಸಂಸ್ಕಾರ, ಮೌಲ್ಯ, ಸಂಸ್ಕೃತಿಯನ್ನು ಶಿಕ್ಷಣದ ಜೊತೆಗೆ ಪಡೆಯುವುದು ಅತ್ಯಮೂಲ್ಯ. ಜೊತೆಗೆ ತಂದೆ-ತಾಯಿ, ಗುರು-ಹಿರಿಯರು ಹಾಗೂ ಪ್ರಕೃತಿ ಮಾತೆಗೆ ಗೌರವ ನೀಡುವುದನ್ನು ಕಲಿಯುಬೇಕು. ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ KIOCL ನ ಅಧಿಕಾರಿ ಲಕ್ಷ್ಮಣ್ ಪವಾರ್‌ರವರು ಮಾತಾಡಿ ಯಾವುದೇ ವ್ಯಕ್ತಿ ಎತ್ತರದ ಸ್ಥಾನಕ್ಕೆ ಏರಬೇಕಾದರೆ ವೈಯಕ್ತಿಕ ಸಾಧನೆಯ ಜೊತೆಗೆ ಸಂಘಟನೆ ಹಾಗೂ ಹಿರಿಯರ ಮಾರ್ಗದರ್ಶನ ಸದಾ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ಸಂಸದರಾದ ಉಮೇಶ್ ಜಾಧವ್‍ರವರ ಧರ್ಮಪತ್ನಿ ಗಾಯತ್ರಿ ಜಾಧವ್, ಸೊಸೆ ಮೇಘ, ಲಕ್ಷ್ಮಣ್‍ರವರ ಪತ್ನಿ ಸಂಗೀತಾ ದಿಲೀಪ್, ಬೀದರ್ ಜಿಲ್ಲೆಯ ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯಕಾರಿ ಸದಸ್ಯರಾದ ಸ್ವರ್ಣ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ ಪ್ರಭಾಕರ್ ಭಟ್ ಸಹಸಂಚಾಲಕರಾದ ರಮೇಶ್ ಎನ್, ಪ್ರೌಢಶಾಲಾ ಮುಖ್ಯಶಿಕ್ಷಕಿಯಾದ ವಸಂತಿ ಕುಮಾರಿ, ಪ್ರೌಢ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಲಾ ಶಿಕ್ಷಕರಾದ ಜಿನ್ನಪ್ಪರವರು ನಿರೂಪಿಸಿದರು.