Tuesday, January 21, 2025
ಸುದ್ದಿ

ಇನ್ನು ಮುಂದೆ ದೇಶದಲ್ಲಿ ಶುರುವಾಗಲಿದೆ ಇಲೆಕ್ಟ್ರಿಕ್ ಬೈಕ್ ಹವಾ – ಕಹಳೆ ನ್ಯೂಸ್

ದೇಶದ ಆಟೋಮೊಬೈಲ್ ರಂಗದಲ್ಲಿ ಈಗ ವಿದ್ಯುತ್ ಚಾಲಿತ ವಾಹನಗಳ ಹೇರಳ ಉತ್ಪಾದನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಕೆಲ ಕಂಪೆನಿಗಳು ವಿದ್ಯುತ್ ಚಾಲಿತ ಕಾರುಗಳನ್ನು, ಸ್ಕೂಟರ್‍ ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ, ವಿದ್ಯುತ್ ಚಾಲಿತ ಬೈಕ್ ಈವರೆಗೆ ಭಾರತಕ್ಕೆ ಕಾಲಿಟ್ಟಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ರಿವೋಲ್ಟ್ ಮೋಟರ್ಸ್ ಎಂಬ ಸಂಸ್ಥೆ ಈ ಕೊರತೆಯನ್ನು ನೀಗಲಿದ್ದು, ಸಂಪೂರ್ಣ ವಿದ್ಯುತ್ ಚಾಲಿತವಾದ ‘ಆರ್‍ವಿ-400’ ಹೆಸರಿನ ಬೈಕುಗಳನ್ನು ಅನಾವರಣ ಮಾಡಿದೆ. ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆ ಈ ವಿದ್ಯುತ್‍ಚಾಲಿತ ಬೈಕು ಲಗ್ಗೆಯಿಡಲಿದೆ ಎಂದು ಝಿಗ್ ವ್ಹೀಲ್ಸ್ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬೈಕಿನ ಬ್ಯಾಟರಿ ಒಂದು ಚಾರ್ಚ್‍ಗೆ 156 ಕಿ.ಮೀ. ದೂರದವರೆಗೆ ಚಲಿಸುತ್ತದೆಂದು ಹೇಳಲಾಗಿದೆ. ಗರಿಷ್ಠ ವೇಗ 85 ಕಿ.ಮೀ. ಇದ್ದು, ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‍ಗಳು ಇರಲಿವೆ. ಜತೆಗೆ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವೂ ಇದರಲ್ಲಿ ಇರಲಿದ್ದು, ಬ್ಲೂಟೂತ್ ಕನೆಕ್ಟಿವಿಟಿ, ದೂರದಲ್ಲೇ ನಿಂತು ಸ್ಮಾರ್ಟ್‍ಫೋನ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರೆಬೆಲ್ ರೆಡ್ ಹಾಗೂ ಕಾಸ್ಮಿಕ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಇದು ಲಭ್ಯವಾಗಲಿದ್ದು, ಇದರ ಬೆಲೆ ಅಂದಾಜು 1 ಲಕ್ಷ ರೂ. ಇರಬಹುದೆಂದು ನಿರೀಕ್ಷಿಸಲಾಗಿದೆ.