Monday, January 20, 2025
ಸಿನಿಮಾ

ಸತೀಶ್ ಮತ್ತು ಹಿತೇಶ್‍ಗಿಂದು ಹುಟ್ಟುಹಬ್ಬದ ಸಂಭ್ರಮ – ಕಹಳೆ ನ್ಯೂಸ್

ಇಂದು ಸ್ಯಾಂಡಲ್‍ವುಡ್‍ನ ಇಬ್ಬರು ನಟರಿಗೆ ಹುಟ್ಟುಹಬ್ಬದ ಸಂಭ್ರಮ. ಒಬ್ಬರು ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿ ಸ್ಟಾರ್ ಆಗಿರುವ ನಟ. ಇನ್ನೊಬ್ಬರು ಈಗತಾನೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಚಿತ್ರರಂಗಕ್ಕೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ, ಪೋಷಕ ಮತ್ತು ಹಾಸ್ಯ ನಟನಾಗಿ ಇದೀಗ ಪರಿಪೂರ್ಣ ನಾಯಕನಟನಾಗಿರುವ ಅಭಿನಯ ಚತುರ ಬಿರುದಾಂಕಿತ ಸತೀಶ್ ನೀನಾಸಂ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಬ್ಬ ಸಾಮಾನ್ಯ ನಟನಾಗಿ ಚಿತ್ರರರಂಗಕ್ಕೆ ಬಂದು ಹೀರೋ ಆಗಿ ನಿರ್ಮಾಪಕರಾಗಿ ಇದೀಗ ‘ಮೈ ನೇಮ್ ಈಸ್ ಸಿದ್ದೇಗೌಡ’ ಮೂಲಕ ನಿರ್ದೇಶಕರ ಪಟ್ಟವನ್ನು ಅಲಂಕರಿಸುತ್ತಿದ್ದಾರೆ ಸತೀಶ್. ಸತೀಶ್ ಕೈ ತುಂಬಾ ಚಿತ್ರಗಳಿವೆ ಅದರಲ್ಲಿ ಮೊದಲನೆಯದಾಗಿ ‘ಬ್ರಹ್ಮಚಾರಿ’ ಬಿಡುಗಡೆಗೊಳ್ಳಲಿದೆ. ಇದಾದ ಮೇಲೆ ತಮಿಳಿನ ‘ಪಗೈವಾನಕ್ಕು ಆರುಲ್ವೈ’ ಚಿತ್ರ ತೆರೆಕಾಣಲಿದೆ. ತದನಂತರ ಕನ್ನಡದಲ್ಲಿ ಗೋಧ್ರ, ಮೈ ನೇಮ್ ಈಸ್ ಸಿದ್ದೇಗೌಡ, ‘ರಾಮನು ಕಾಡಿಗೆ ಹೋದನು’ ಮತ್ತು ಓಲ್ಡ್ ಮದ್ರಾಸ್ ರೋಡ್ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿದೆ.

ಎರಡನೆಯದಾಗಿ ಇವತ್ತು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಟ ‘ಹಿತೇಶ್ ಕಾಪಿಕಡ್ಕ’ ಇವರ ಹೆಸರು ಹಿತೇಶ್ ಅಂದ್ರೆ ಹೆಚ್ಚಿನವರಿಗೆ ತಿಳಿಯುವುದಿಲ್ಲ. ಬದಲಾಗಿ ‘ಪ್ಯಾಕು ಪ್ಯಾಕು’ ಅಂದರೆ ಎಲ್ಲರಿಗೂ ತಿಳಿಯುತ್ತದೆ ಅಷ್ಟರ ಮಟ್ಟಿಗೆ ಹಿತೇಶಗೆ ಕಾಮಿಡಿ ಕಿಲಾಡಿಗಳು ಶೋ ಹೆಸರನ್ನು ತಂದು ಕೊಟ್ಟಿತ್ತು. ಹಿತೇಶ್ ನಟಿಸಿದ ಮೊದಲ ಚಿತ್ರ ತುಳುವಿನ ‘ಅಪ್ಪೆ ಟೀಚರ್’ ಇದಾದ ಮೇಲೆ ದರ್ಶನ ನಾಯಕ ನಟನಾಗಿ ಅಭಿನಯಿಸಿದ್ದ ಮತ್ತು ಇತ್ತೀಚಿಗಷ್ಟೇ ಶತ ದಿನವನ್ನು ಆಚರಿಸಿಕೊಂಡ ಸಿನೆಮಾ ‘ಯಜಮಾನ’ ಮುಂದೆ ಹಿತೇಶ್ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳಿವೆ. ಅವುಗಳಲ್ಲಿ ಒಂದು ಪ್ರೇಮ್ಸ್ ನಿರ್ದೇಶನದ ‘ರಾಣ’.
ಸತೀಶ್ ಮತ್ತು ಹಿತೇಶ್‍ಗೆ ಹುಟ್ಟುಹಬ್ಬದ ಶುಭಾಶಯಗಳು, ಇವರ ಮುಂದಿನ ಎಲ್ಲಾ ಚಿತ್ರಗಳು ಯಶಸ್ವಿಯಾಗಲಿ.