Recent Posts

Monday, November 25, 2024
ಸುದ್ದಿ

ಮಂಗಳೂರಿನಲ್ಲಿ ಹೆಚ್ಚಾದ ಮಲೇರಿಯಾ ಹಾವಳಿ! – ಕಹಳೆ ನ್ಯೂಸ್

ಮಲೇರಿಯಾ ವಿಷಯದಲ್ಲಿ ಮಂಗಳೂರು ರಾಜ್ಯದಲ್ಲಿಯೇ ಮತ್ತೊಮ್ಮೆ ಮುಂಚೂಣಿಯಲ್ಲಿರುವುದು ನಗರದ ಜನತೆಯನ್ನು ಚಿಂತೆಗೀಡು ಮಾಡಿದೆ. ಈ ವಿಷಯಗಳಿಗೆ ಸಂಭಂದಿಸಿದಂತೆ ‘ಕಹಳೆ ನ್ಯೂಸ್’ ನಿನ್ನೆ ಬಿಗ್ ಡಿಬೆಟ್‍ನಲ್ಲಿ ರೋಗದ ಕಾರಣ, ಹರಡುವಿಕೆ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿತ್ತು.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಮಲೇರಿಯಾ, ಡೆಂಗೆ ಹತೋಟಿಯಲ್ಲಿ ವಿಫಲರಾಗಿವೆ. 2019 ಜನವರಿ ತಿಂಗಳಿನಿಂದ ಮಾರ್ಚ್‍ವರೆಗೆ ಜಿಲ್ಲೆಯಲ್ಲಿ ಒಟ್ಟು 494 ಮಲೇರಿಯಾ ಪ್ರಕರಣಗಳು ದಾಖಲಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಮಂಗಳೂರು ನಗರದ್ದು ಸಿಂಹಪಾಲು. ಪಾಲಿಕೆ ವ್ಯಾಪ್ತಿಯಲ್ಲಿ 470 ಮಲೇರಿಯಾ ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಮಂಗಳೂರು ತಾಲೂಕು 16, ಬಂಟ್ವಾಳ 4, ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಸುಳ್ಯದಲ್ಲಿ ಯಾವುದೇ ಪ್ರಕರಣ ಪತ್ತೆಯಾಗದಿರುವುದು ಸದ್ಯಕ್ಕೆ ನೆಮ್ಮದಿಯ ವಿಚಾರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಿಕೆ ಆರೋಗ್ಯ ತಂಡ ನಗರದ ಮಹಾಕಾಳಿಪಡ್ಪು ಮತ್ತು ಎಮ್ಮೆಕೆರೆ ಪ್ರದೇಶದಲ್ಲಿ ಇತ್ತೀಚಿಗೆ 300ಕ್ಕೂ ಅಧಿಕ ಮನೆಗಳಲ್ಲಿ ಸರ್ವೇ ನಡೆಸಿತ್ತು. ಇದರಲ್ಲಿ ಮಹಾಕಾಳಿ ಪಡ್ಪು ಪರಿಸರದಲ್ಲೇ 30 ಮಂದಿಗೆ ಜ್ವರ ಇರುವುದು ಪತ್ತೆಯಾಗಿದೆ.

ಇದರ ಪೈಕಿ 18 ಜನರಿಗೆ ಡೆಂಗೆ ಲಕ್ಷಣ ಕಂಡು ಬಂದಿದೆ. 4 ಮಂದಿಗೆ ಡೆಂಗೆ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮಲೇರಿಯಾ ಹಲವು ವರ್ಷಗಳಿಂದ ಗಟ್ಟಿಯಾಗಿ ಬೇರು ಬಿಟ್ಟಿದೆ. ಇದೀಗ ಅದರೊಂದಿಗೆ ಡೆಂಗೆ ಭೀತಿ ಶುರುವಾಗಿದೆ. 2017 ಜನವರಿಯಿಂದ ಏಪ್ರಿಲ್ ವರೆಗೆ 8 ಪಾಸಿಟಿವ್ ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. ಆದರೆ 2018 ಜನವರಿಯಿಂದ ಏಪ್ರಿಲ್ ವರೆಗೆ ಒಟ್ಟು 40 ಪ್ರಕರಣಗಳು ದಾಖಲಾಗಿವೆ.