Tuesday, January 21, 2025
ಸುದ್ದಿ

ಭಾರೀ ಮಳೆಗೆ ಕಾಸರಗೋಡಿನ ಹಲವೆಡೆ ಅಪಾರ ಹಾನಿ – ಕಹಳೆ ನ್ಯೂಸ್

ಕಾಸರಗೋಡು: ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಹಲವೆಡೆ ಅಪಾರ ಹಾನಿ ಉಂಟಾಗಿದೆ. ಬೇಳ, ಕುಂಟಿಕಾನ, ಮಾಡತ್ತಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದೆ. ಜೋನಿ ಡಿಸೋಜ ಎಂಬವರ ಮನೆಗೆ ಸಿಡಿಲು ಬಡಿದಿದೆ. ವಿದ್ಯುತ್ ಉಪಕರಣಗಳು ಸಂಪೂರ್ಣ ಭಸ್ಮವಾಗಿವೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು ಮನೆಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿಮೆಂಟ್ ಶೀಟ್‍ಗಳು ಸಂಪೂರ್ಣ ನೆಲಕಚ್ಚಿವೆ. ಮನೆಗೂ ಹಾನಿ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಬದಿಯಡ್ಕ ಕಿನ್ನಿಮಾಣಿಯ ಲೀಲಾವತಿ, ನಾರಾಯಣ ನಾಯ್ಕ್, ಸರಸ್ವತಿ, ರಾಧಾಕೃಷ್ಣ ಮೊದಲಾದವರ ಮನೆಗೆ ನೀರು ನುಗ್ಗಿದೆ. ಪುತ್ತಿಗೆ ಅರಿಯಪ್ಪಾಡಿ ಕಾಲನಿಯಲ್ಲಿ ಬಾವಿಯೊಂದರ ಆವರಣ ಕುಸಿದಿದೆ. ಮುಗು ಸರಕಾರಿ ಎಲ್.ಪಿ. ಶಾಲಾ ಆವರಣ ಗೋಡೆ ಕುಸಿದಿದೆ. ಬುಧವಾರ ಸಂಜೆಯ ಬಳಿಕ ಜಿಲ್ಲೆಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಅಪಾರ ಹಾನಿ ಸಂಭವಿಸಿರುವುದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು