Monday, January 20, 2025
ಸಿನಿಮಾ

300 ವರ್ಷದ ಹಿಂದಿನ ಕಥೆ ಹೇಳಲಿದ್ದಾರೆ ರಕ್ಷಿತ್ ಶೆಟ್ಟಿ – ಕಹಳೆ ನ್ಯೂಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಇದರ ಬೆನ್ನಲ್ಲೇ ‘777 ಚಾರ್ಲಿ’ ಕೂಡ ಬರಲಿದೆ. ಇದಾದ ಮೇಲೆ ರಕ್ಷಿತ್ ಯಾವ ಪ್ರಾಜೆಕ್ಟ್ ನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ರಕ್ಷಿತ್ ಅಭಿಮಾನಿಗಳಲ್ಲಿ ಮೂಡಿತ್ತು.
ಕಾರಣ ಹೇಮಂತ್ ರಾವ್ ಜೊತೆಗೆ ‘ತೆನಾಲಿ’ ಎಂಬ ಸ್ವಾತಂತ್ರ್ಯ ಪೂರ್ವದ ಇನ್ವೆಷ್ಟಿಗೇಷನ್ ಥ್ರಿಲ್ಲರ್, ಉಳಿದವರು ಕಂಡಂತೆ ನಿರ್ಮಾಪಕರ ಇನ್ನೂ ಹೆಸರಿಡದ ಚಿತ್ರ ಮತ್ತು ರಕ್ಷಿತ್ ಮತ್ತೆ ನಿರ್ದೇಶನಕ್ಕೆ ಕಂಬ್ಯಾಕ್ ಮಾಡುವ ಚಿತ್ರ ಪುಣ್ಯಕೋಟಿ. ಇಷ್ಟು ಚಿತ್ರಗಳಲ್ಲಿ ರಕ್ಷಿತ್ ಪುಣ್ಯಕೋಟಿಯನ್ನು ಮೊದಲು ಆರಂಭಿಸಲಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೊಂದು ಭಾರೀ ಬಜೆಟ್ ಸಿನಿಮಾ. ಎರಡ್ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಶ್ರೀಮನ್ನಾರಾಯಣ ಚಿತ್ರ ರಿಲೀಸ್ ಆಗುತ್ತಿದ್ದಂತೆಯೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಬಹುಕೋಟಿಯ ಚಿತ್ರ ಇದಾಗಿದ್ದು, ಇಂಥದ್ದೊಂದು ಚಿತ್ರವನ್ನು ಮಾಡಲು ಶ್ರೀಮನ್ನಾರಾಯಣ ಚಿತ್ರವು ಧೈರ್ಯ ತುಂಬಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಉಳಿದವರು ಕಂಡಂತೆ’ ಚಿತ್ರದ ಮೂಲಕ ನಿರ್ದೇಶಕರಾದ ರಕ್ಷಿತ್, ಆ ನಂತರ ನಟನೆಯಲ್ಲಿ ಬಿಝಿ ಆದರು. ಐದು ವರ್ಷದ ನಂತರ ಮತ್ತೆ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

‘ಪುಣ್ಯಕೋಟಿ’ಗಾಗಿ ಭಾರೀ ಗಾತ್ರದ ಸೆಟ್ ಹಾಕಲು ಪ್ಲ್ಯಾನ್ ಆಗಿದೆ. ಹಲವು ಭಾಷೆಗಳಲ್ಲೂ ಈ ಚಿತ್ರ ತಯಾರು ಮಾಡಲು ಯೋಜನೆ ಕೂಡ ರೂಪಿಸಲಾಗಿದೆ ಎಂದಿದ್ದಾರೆ