ಸರಸ್ವತೀ ವಿದ್ಯಾಲಯ ಪ್ರೌಢ ಹಾಗೂ ಪದವಿಪೂರ್ವ ಕಾಲೇಜು ಕಡಬ: ವಿದ್ಯಾರ್ಥಿಗಳು ಸಮಾಜಕ್ಕೆ ನಾಯಕರಾಗುವ ಗುಣ ಬೆಳೆಸಿಕೊಳ್ಳಬೇಕು- ಜೇಸಿ ಮೋಹನ್ ಕೋಡಿಂಬಾಳ – ಕಹಳೆ ನ್ಯೂಸ್
ವಿದ್ಯಾರ್ಥಿಗಳು ಕೇವಲ ಶಾಲೆಯಲ್ಲಿ ಅಲ್ಲದೆ ಸಮಾಜಕ್ಕೆ ನಾಯಕರಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ನಿಧಿ ಗೋಲ್ಡ್ ಕಡಬ ಶಾಖೆಯ ವ್ಯವಸ್ಥಾಪಕ ಜೇಸಿ. ಮೋಹನ್ ಕೋಡಿಂಬಾಳ ತಿಳಿಸಿದರು. ಅವರು ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಡಳಿತ ಮಂಡಳಿಯ ನಿರ್ದೇಶಕರಾದ ಶಿವಪ್ರಸಾದ್ ರೈ ಮೈಲೇರಿಯವರು ಮಾತನಾಡಿ ಶಾಲೆ, ಕಾಲೇಜುಗಳಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳು ದೇಶದ ಚುನಾವಣಾ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಾವು ಬೆಳೆಯುವುದರ ಜೊತೆಗೆ ಸಂಘವನ್ನು ಬೆಳೆಸಬೇಕು ಎಂದರು.
ಚುನಾವಣಾ ಪ್ರಕ್ರಿಯೆಯ ವರದಿಯನ್ನು ಚುನಾವಣಾಧಿಕಾರಿಗಳಾಗಿ ಸಹಕರಿಸಿದ ಪ್ರೌಢ ವಿಭಾಗದ ಶಿಕ್ಷಕಿ ಸೌಮ್ಯ, ಕಾಲೇಜು ವಿಭಾಗದಿಂದ ಉಪನ್ಯಾಸಕ ನಾಗರಾಜ್ ವಾಚಿಸಿದರು. ದೈಹಿಕ ಶಿಕ್ಷಕ ಲಕ್ಮೀಶ ಗೌಡ ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಸೀತರಾಮ ಗೌಡ ವಿದ್ಯಾರ್ಥಿಗಳು ಪ್ರತಿಯೊಂದು ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಸ್ಥೆಯ ಹೆಸರನ್ನು ಬೆಳೆಸಬೇಕು ಎಂದರು.
ವೇದಿಕೆಯಲ್ಲಿ ಕಾಲೇಜು ವಿಭಾಗದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಾ ಪಿ.ಸಿ 10ನೇ ತರಗತಿ ಸ್ವಾಗತಿಸಿ, ಪೂಜಾ ಕೆ ದ್ವಿತೀಯ ಪಿಯುಸಿ ವಂದಿಸಿ, ಚೈತನ್ಯ ಕೆ.ಬಿ 9ನೇ ತರಗತಿ ಕಾರ್ಯಕ್ರಮ ನಿರೂಪಿಸಿದರು.