Recent Posts

Monday, November 18, 2024
ಸುದ್ದಿ

ರಮಾನಾಥ ರೈ ಅಶ್ಲೀಲ ಬೈಗುಳ ನೆನೆದು ಮತ್ತೆ ಕಣ್ಣೀರಿಟ್ಟ ಪೂಜಾರಿ! – ವೀಡಿಯೋ ವೀಕ್ಷಿಸಿ

 

ಮಂಗಳೂರು : ಎರಡು ದಿನಗಳ ಹಿಂದೆ ಹರಿಕೃಷ್ಣ ಬಂಟ್ವಾಳ್ ಭಾಷಣದ ವೇಳೆ ರಮಾನಾಥ ರೈ ಅವರ ಬೈಗುಳ ನೆನೆದು ವೇದಿಕೆಯಲ್ಲಿ ಅತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಇದೀಗ ಮತ್ತೊಮ್ಮೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಕ್ಕಿ ಅತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾಗಿದ್ದು, ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ ಚೆನ್ನಮ್ಮ. ತಾಯಿಯ ತಾಯಿ ನನ್ನ ಅಜ್ಜಿ ದೇಯಿ ಬೈದೆತಿ. ಅದೇ ರೀತಿ ಕೋಟಿ ಚೆನ್ನಯರ ತಾಯಿಯೂ ದೇಯಿ ಬೈದೆತಿ. ಹಾಗಾದರೆ ರಮಾನಾಥ ರೈ ಹೇಳಿದಂತೆ ನನ್ನ ತಾಯಿ ಸೂ… , ನಾನು ಸೂ.. ಮಗ ಎಂಬ ಪ್ರಶ್ನೆ ಮುಂದಿಟ್ಟು ಗದ್ಗದಿತರಾಗಿ ಕಣ್ಣೀರಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಲ್ಲಿ ನಡೆದ ಕೋಟಿ-ಚೆನ್ನಯ್ಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಜನ ಸೇರಿದ್ದ ಸಭೆಯಲ್ಲಿ 80 ವರ್ಷದ ಹಿರಿಯರಾದ ಜನಾರ್ದನ ಪೂಜಾರಿಯವರು ಅತ್ತು ಕರೆದಾಗ, ವೇದಿಕೆ ಮೇಲಿದ್ದ ಮಂಗಳೂರು ಪಾಲಿಕೆ ಮೇಯರ್ ಕವಿತಾ ಸನಿಲ್ ಕೂಡಾ ಕಣ್ಣೀರು ಹಾಕಿದ್ದಾರೆ. ವೇದಿಕೆಯಲ್ಲಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.

https://youtu.be/0HtaV8RfKE8

Leave a Response