ಆತೂರು : ಮಕ್ಕಳಿಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ಸಮಾಜದ ಕೊಡುಗೈ ದಾನಿಗಳಿಂದ ಪುಸ್ತಕ ಬ್ಯಾಗ್ ವಿತರಣಾ ಕಾರ್ಯಕ್ರಮಗಲು ನಡೆಯುತ್ತಿರುತ್ತದೆ. ಅಂತೆಯೇ ಶಂಸುಲ್ ಉಲಮಾ ಕ್ರಿಯಾ ಸಮಿತಿ ಆತೂರು ಇದರ ವತಿಯಿಂದ 5ನೇ ವರ್ಷದ ಶಾಲಾಮಕ್ಕಳಿಗೆ ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು. ಮಗ್ರೀಬ್ ನಮಾಝಿನ ನಂತರ ಆತೂರು ಮುಹ್ಯುದ್ದೀನ್ ಜುಮಾ ಮಸೀದಿಯ ಮದರಸ ಹಾಲಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಮುಸ್ಲಿಯಾರ್ ದುವಾ ಮೂಲಕ ಚಾಲನೆ ನೀಡಿದರು. ಜಮಾಅತಿನ ಹಾಗೂ ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷರು ಆದ ಹೈದರ್ ಕಲಾಯಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜಮಅತಿನ ನೂತನ ಖತೀಬರಾದ ಮಹಮ್ಮದ್ ಹನೀಫ್ ಫಾಝಿಲ್ ಹನೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫಲೂಲುದ್ದೀನ್ ಹೇಂತಾರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಹಿಯ್ಯುದ್ದೀನ್ ಜಮಾ ಮಸೀದಿ ಆತೂರು ಮಾಜಿ ಅಧ್ಯಕ್ಷರಾದ ಅಯ್ಯುಬ್ ಹಾಜಿ ಅಮೈ, ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಸಲಹೆ ಸಮಿತಿ ಸದಸ್ಯರು ಆದ ಆದಂ ಹೇಂತಾರ್, ಅಝಾದ್ ಹೇಂತಾರ್, ಅಬ್ದುಲ್ಲ ಹಾಜಿ ಕುಂಡಾಜೆ, ಉದ್ಯಮಿಗಳು ಆದ ಅಬ್ದುಲ್ ಗಫ್ಫಾರ್ ಹೇಂತಾರ್ ಮತ್ತು ಅಬ್ದುಲ್ ರಝಾಕ್ ಮುಬಾರಕ್, ಮೂಸ ಮುಸ್ಲಿಯಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಮೊದಲು ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಶಂಸುಲ್ ಉಲಮಾ ಮೌಲೀದ್ ಮಜ್ಲಿಸ್ ಕಾರ್ಯಕ್ರಮಕ್ಕೆ ಒಎಒ ಖತೀಬರಾದ ಮಹಮ್ಮದ್ ಹನೀಫ್ ಫಾಝಿಲ್ ಹನೀಫಿ ನೇತೃತ್ವ ನೀಡಿದರು.ಪಿ.ಎ ಮರ್ಧಾಳ ಸ್ವಾಗತಿಸಿ ವಂದಿಸಿದರು. ನಾಸೀರ್ ಆರ್.ಕೆ ನಿರೂಪಿಸಿದರು. ಇನ್ನು ಈ ಸಂದರ್ಭದಲ್ಲಿ ಶಂಸುಲ್ ಉಲಮಾ ಕ್ರಿಯಾ ಸಮಿತಿ ಆತೂರು ಇದರ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.