Tuesday, January 21, 2025
ಸುದ್ದಿ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಗೆ ಬೀಳ್ಕೊಡುಗೆ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಗೋಳ್ತಮಜಲು ಗ್ರಾಮ ಪಂಚಾಯತ್ ಮತ್ತು ಬಾಲ ವಿಕಾಸ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲ್ಲಡ್ಕ ಪಂಚಾಯತ್ ಅಂಗನವಾಡಿ ಕಾರ್ಯಕರ್ತೆ ಬೇಬಿ ಹಾಗೂ ಬೊಮ್ಮನಕೋಡಿ ಅಂಗನವಾಡಿ ಕೇಂದ್ರದ ಅಂಗವಾಗಿ ಸಹಾಯಕಿ ಕ್ರಿಸ್ತಿನ್ ತೋರಾಸ್ ಈವರ ಬೀಳ್ಕೊಡುಗೆ ಗೋಳ್ತಮಜಲು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಗ್ರಾ.ಪಂ.ಉಪಾಧ್ಯಕ್ಷೆ ಮುಸ್ತಾಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಗೋಳ್ತಮಜಲು ಅಂಗನವಾಡಿ ಕಾರ್ಯಕರ್ತೆ ಬೇಬಿ ಅವರು 28 ವರ್ಷಗಳ ಕಾಲ ಅಂಗನವಾಡಿಯಲ್ಲಿ ಸಲ್ಲಿಸಿದ ಸೇವೆ ಇತರ ಕಾರ್ಯಕರ್ತೆಯರಿಗೆ ಮಾದರಿಯಾಗಿದೆ. ಇಂತಹ ಕಾರ್ಯಕರ್ತೆಯರಿಂದ ಅಂಗನವಾಡಿ ಕೇಂದ್ರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ.ಪೂಜಾರಿ ಮಾತನಾಡಿ ಅಂಗನವಾಡಿಗಳು ದೇವಸ್ಥಾನವಿದ್ದಂತೆ. ಅಂಗನವಾಡಿ ಶಿಕ್ಷಣ ಮಗುವಿನ ಸವಾರ್ಂಗೀಣ ಬೆಳವಣಿಗೆಗೆ ಪೂರಕವಾಗಿದೆ. ಪ್ರತಿಯೋಬ್ಬರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿ ಎಂದು ಹೇಳಿದರು. ಇಲ್ಲಿ ಸೇವೆ ಮಾಡುವ ಕಾರ್ಯಕರ್ತರು ತಮ್ಮ ಮನೆಯಂತೆ ಅಲ್ಲಿ ಕೆಲಸ ಮಾಡುತ್ತಾರೆ. ಅವರ ಉತ್ತಮ ಸೇವೆ ಮಗುವಿನ ಮುಂದಿನ ಜೀವನಕ್ಕೆ ದಾರಿ ದೀಪವಾಗುತ್ತದೆ ಎಂದು ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಭಾರ ಶಿಶು ಯೋಜನಾಧಿಕಾರಿ ಗಾಯತ್ರಿ ಬಾಯಿ ಎಚ್ ಮಾತನಾಡಿ, ಪ್ರತಿಯೊಬ್ಬ ಸರಕಾರಿ ಉದ್ಯೋಗಿ , ಸರಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ಹೊಸ ಜೀವನ ಪ್ರಾರಂಭ ಮಾಡುತ್ತಾರೆ.ಸರಕಾರಿ ಸೇವೆಯ ಸಂದರ್ಭದಲ್ಲಿ ನಾವು ಮಾಡಿದ ಉತ್ತಮ ಕಾರ್ಯಗಳು , ನಿವೃತ್ತಿಯ ಬಳಿಕದ ಜೀವನದಲ್ಲಿ ಅನುಭವ ಕ್ಕೆ ಬರುತ್ತದೆ. ಸುದೀರ್ಘ ಸರಕಾರಿ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುವುದು ಸುಲಭದ ಮಾತಲ್ಲ, ಆಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇವರಿಬ್ಬರು ನಿವೃತ್ತಿ ಹೊಂದಿರುವುದು ನಿಜಕ್ಕೂ ಇಲಾಖೆಗೆ ಸಂದ ಗೌರವ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ತಾ.ಪಂ.ಸದಸ್ಯ ಮಹಾಬಲ ಆಳ್ವ, ಹಿರಿಯರಾದ ನಾಗವೇಣಿ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಲಖಿತ ಶೆಟ್ಟಿ, ಗುರುವಪ್ಪ ಗೌಡ, ರಾಜೇಶ್ ಕೊಟ್ಟಾರಿ, ಮಹಮ್ಮದ್, ಸುಮಯ್ಯ, ವೇದಾವತಿ, ಲತಾ, ಜಯಶ್ರೀ, ಅಯಿಶಾ, ಗೋಪಾಲ ಪೂಜಾರಿ ಎನ್. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಿವಾನಂದ, ಮಾಜಿ ಗ್ರಾ.ಪಂ.ಸದಸ್ಯ ಅಬುಬಕ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಮೇಲ್ವಿಚಾರಕಿ ನಳಿನಾಕ್ಷಿ, ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಮತ್ತಿರರು ಉಪಸ್ಥಿತರಿದ್ದರು.

ಬಾಳ್ತಿಲ ವಲಯದ ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿದರು. ನೆಟ್ಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ ಕುಮಾರಿ ವಂದಿಸಿದರು. ಅಮ್ಟೂರು ಕೇಂದ್ರದ ಕಾರ್ಯಕರ್ತೆ ಸರ್ವಾಣಿ ಎಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.