Wednesday, January 22, 2025
ಸುದ್ದಿ

ಜೂನ್ 25ರಂದು ಕಿಸಾನ್ ಸಮ್ಮಾನ್ ಯೋಜನೆ ನೋಂದಾವಣೆಗೆ ಕೊನೆ ದಿನ – ಕಹಳೆ ನ್ಯೂಸ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ವಾರ್ಷಿಕ 600 ಧನಸಹಾಯ ನೀಡಲಾಗುತ್ತದೆ. ಈ ಯೋಜನೆಯ ನೋಂದಾವಣಿಗೆ ಜೂನ್ 25 2019 ಕೊನೆಯ ದಿನವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸ್ಥಳೀಯ ಗ್ರಾಮ ಪಂಚಾಯತ್‍ನ್ನು ಸಂಪರ್ಕಿಸಬಹುದಾಗಿದೆ. ನಗರ ಪ್ರದೇಶದ ಕೃಷಿಕರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. ಈ ವೇಳೆ ಕೆಳಗಿನ ದಾಖಲೆಗಳನ್ನು ನೀಡಿ ನೋಂದಾವಣೆ ಮಾಡಿಕೊಳ್ಳಲ್ಲು ಸೂಚಿಸಲಾಗಿದೆ.

ಆಧಾರ್ ಕಾರ್ಡ್, ಆಧಾರ್ ಅನುಮತಿ ಪತ್ರ (ಕಛೇರಿಯಲ್ಲೆ ಪಡೆದು ಸಹಿ ಮಾಡಿ ನೀಡುವುದು) ಸರ್ವೇ ನಂಬರ್ ವಿವಿರ, ಬ್ಯಾಂಕ್ ಖಾತೆಯ ಮೊದಲ ಪುಟದ ಜೆರಾಕ್ಸ್ ನೀಡಿ ನೋಂದಾವಣೆ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರ್ಷಿಕ 6000 ಆರ್ಥಿಕ ನೆರವು ನೀಡುವ ಈ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಎಲ್ಲಾ ರೈತರು ಅರ್ಹರಾಗಿರುತ್ತಾರೆ. ಆದರೆ ಸರ್ಕಾರಿ ನೌಕಕರು, ವಕೀಲರು, ಆದಾಯ ತೆರಿಗೆ ಪಾವತಿಸುವವರು, ತಾಲೂಕು. ಪಂ ಸದಸ್ಯರು. ಮತ್ತು ಅಧ್ಯಕ್ಷರು, ಜಿ. ಪಂ ಸದಸ್ಯರು, ಅಧ್ಯಕ್ಷರು ಈ ಯೋಜನೆಯಡಿಯಲ್ಲಿ ಬರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು