Sunday, November 24, 2024
ಸುದ್ದಿ

ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್‍ನಲ್ಲಿ ಮಗ್ನರಾದ ರಾಹುಲ್ ಗಾಂಧಿ..! – ಕಹಳೆ ನ್ಯೂಸ್

ನವದೆಹಲಿ : ರಾಹುಲ್ ಗಾಂಧಿ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಸಂಸತ್ತಿನಲ್ಲಿ ರಫೇಲ್ ಡೀಲ್ ಕುರಿತ ಬಿಸಿ ಬಿಸಿ ಚರ್ಚೆ ವೇಳೆ ಪ್ರಧಾನಿ ಮೋದಿಯವರನ್ನು ತಬ್ಬಿಕೊಂಡು ಕಣ್ಣು ಮಿಟಿಕಿಸಿ ಬಹಳ ನಗೆಪಾಟಲಿಗೀಡಾಗಿದ್ದರು. ನಂತರ ಮೊನ್ನೆ ವಯನಾಡ್ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದಂದು ಸಂಸತ್ತಿನಲ್ಲಿ ಕೆಲಕಾಲ ಕಾಣಿಸಿಕೊಳ್ಳದಿದ್ದಾಗ ಅವರ ಆಪ್ತರ ಅವರನ್ನು ಹುಡುಕುವಾಗ ಸಂಸತ್ತು ಹೊರಗೆ ಕಾಣಿಸಿಕೊಂಡು ಅಲ್ಲೂ ಮಾಧ್ಯಮದವರ ಮುಂದೆ ಕಣ್ಣು ಮಿಟಿಕಿಸಿದ್ರು. ಇದೀಗ ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ವೇಳೆ ರಾಹುಲ್ ಮೊಬೈಲ್ ನೋಡ್ತಾ ಕೂತಿದ್ದ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ, ರಾಷ್ಟ್ರಪತಿ ಭಾಷಣದ ವೇಳೆ ಅವರ ಮಾತುಗಳಿಗೆ ಕಿವಿಗೊಡದೆ ಸಣ್ಣ ಮಕ್ಕಳಂತೆ ಮೊಬೈಲ್ ನೋಡಿಕೊಂಡು ಕುಳಿತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಕುರಿತು ಭಾರಿ ಟ್ರೋಲ್‍ಗಳಾಗುತ್ತಿದೆ. ಇದಕ್ಕೆ ಪೂರಕವಾದ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ರಾಷ್ಟ್ರಪತಿಗಳ 1 ಗಂಟೆಗಳ ಸುಧೀರ್ಘ ಭಾಷಣದಲ್ಲಿ ರಾಹುಲ್, ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್ ಸ್ಕ್ರೋಲ್ ಮಾಡುತ್ತಾ, ಏನನ್ನೋ ಟೈಪ್ ಮಾಡುತ್ತಿದ್ದರು..

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊಬೈಲ್ ಬಳಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅಧಿವೇಶನದಲ್ಲಿ ಭಾಗವಹಿಸಿದ್ದ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳ ಭಾಷಣವನ್ನು ಗಮನವಿಟ್ಟು ಕೇಳುತ್ತಾ, ಮಗ್ನರಾಗಿದ್ದರು. ಆದರೆ ಮಗ ರಾಹುಲ್ ಗಮನ, ಬೇರೆಡೆಗೇ ಇತ್ತು. ಅವರು ರಾಷ್ಟ್ರಪತಿಗಳ ಭಾಷಣ ಕೇಳದೇ ತಮ್ಮದೇ ಜಗತ್ತಿನಲ್ಲಿ ತೇಲಾಡುತ್ತಿದ್ದರು. ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸುತ್ತಾ, ಆಗಾಗ್ಗೆ ತಾಯಿ ಸೋನಿಯಾ ಜತೆ ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉರಿ ಹಾಗೂ ಬಾಲ್‍ಕೋಟ್‍ಗಳ ಮೇಲೆ ಭಾರತದ ದಾಳಿಯ ವಿಚಾರವಾಗಿ ರಾಷ್ಟ್ರಪತಿಗಳ ಮಾತನಾಡಿದಾಗ ಇಡೀ ಸಭೆ ಚಪ್ಪಾಳೆ ತಟ್ಟಿ, ಪ್ರಶಂಸೆ ವ್ಯಕ್ತಪಡಿಸಿತು. ಆದರೆ ರಾಹುಲ್ ಇದ್ಯಾವುದಕ್ಕೂ ಸ್ಪಂದಿಸದೆ ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು. ಈ ಬಗ್ಗೆ ಸೋನಿಯಾ ಕಣ್ಸನ್ನೆಯಲ್ಲೇ ಎಚ್ಚರಿಸಿದರೂ, ರಾಹುಲ್ ಯಾವುದನ್ನೂ ಲೆಕ್ಕಿಸದೇ ತಮ್ಮ ಪಾಡಿಗೆ ತಾವಿದ್ದರು. ಇದು ರಾಹುಲ್ ಗಾಂಧಿಗೆ, ಪಕ್ಷ, ದೇಶ, ತನ್ನ ಸ್ಥಾನದ ಬಗ್ಗೆ ಎಷ್ಟು ಗೌರವ ಇದೆ, ಯಾವ ರೀತಿಯಾದ ಬೇಜವಾಬ್ದಾರಿ ಇದೆ ಅನ್ನೋದನ್ನು ಅವರೇ ತೋರಿಸಿಕೊಟ್ಟಂತಾಗಿದೆ.