ಪುತ್ತೂರು : ಗಲ್ಲು ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಅವಮಾನ ಮಾಡಿದ ಪಾಕ್ ಸರ್ಕಾರದ ವಿರುದ್ಧ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್ ಆಕ್ರೋಷ ವ್ಯಕ್ತ ಪಡಿಸಿದೆ.
ನಗರದ ಬಸ್ ನಿಲ್ದಾಣದ ಬಳಿ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿ ಪಾಕ್ ನಡೆಯನ್ನು ಖಂಡಿಸಿದರು. ಪ್ರತಿಭಟನೆಯ ವೇಳೆ ಪಾಕಿಸ್ತಾನ ಧ್ವಜದ ಮೇಲೆ ನಿಂತು ಬಳಿಕ ಧ್ವಜವನ್ನು ಸುಟ್ಟಿದ್ದಾರೆ.
ಪಾಕಿಸ್ತಾನ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದ್ದು, ಈ ದೇಶದ ಪವಿತ್ರವಾಗಿರುವಂತಹ ತಾಳಿ ಮತ್ತು ಬಳೆಗಳನ್ನು ತೆಗೆಸಿ ಭೇಟಿ ಮಾಡಿಸಿದೆ. ಅಷ್ಟೇ ಅಲ್ಲದೇ ಅವರ ಪಾದರಕ್ಷೆಯಲ್ಲಿ ಚಿಪ್ ಇರಬಹುದು ಎಂದು ಅದನ್ನು ತೆಗೆಸಿದ್ದಾರೆ. ಇದು ಪಾಕ್ ಸರ್ಕಾರದಿಂದ ಆಗಿರುವ ಮಾನವ ಹಕ್ಕುಗಳ ಉಲ್ಲಂಘನೆ. ಇಡೀ ಪ್ರಪಂಚಕ್ಕೆ ಪಾಕಿಸ್ತಾನ ತಲೆನೋವು ಆಗಿದೆ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಸೇನೆಗೆ ಪಾಪಿ ಪಾಕಿಸ್ತಾನವನ್ನು ಇಡೀ ಜಗತ್ತಿನ ನಕ್ಷೆಯಲ್ಲಿ ಇಲ್ಲದಂತೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಬಜರಂಗದಳದ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡರಾದ ಸಹಜ್ ರೈ, ವಿಶ್ವಹಿಂದೂ ಪರಿಷದ್ ಮುಖಂಡರಾದ ಸತೀಶ್, ಜನಾರ್ಧನ ಬೆಟ್ಟ, ಮಾಧವ ಪೂಜಾರಿ, ಶ್ಯಾಮ ಸುದರ್ಶನ ಹೊಸಮೂಲೆ, ಹರೀಶ್ ದೊಲ್ಪಾಡಿ, ಶ್ರೀಧರ ತೆಂಕಿಲ, ಸ್ವರೂಪ್, ಜೇತೇಶ್ ಬಲ್ನಾಡು, ನಿತಿನ್, ಹಿಂ.ಜಾ.ವೇ. ಮುಖಂಡ ಅಜಿತ್ ರೈ, ಬಿ.ಜೆ.ಪಿ ಮುಖಂಡರಾದ ಜಯಂತಿ ಬಲ್ನಾಡು, ಶೋಭಾ ಮತ್ತಿತರರು ಉಪಸ್ಥಿತರಿದ್ದರು.