ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸರಕಾರಿ ಬಸ್ಸನ್ನೆ ಅವಲಂಬಿತರಾಗಿರುತ್ತಾರೆ. ಕೆಎಸ್‌ಆರ್‌ಟಿಸಿ ಬಸ್ಸ್ ಪಾಸ್ ಮಾಡಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೇ ಜಾಸ್ತಿ. ಆದರೆ ಶಾಲಾ- ಕಾಲೇಜು ಆರಂಭವಾಗಿ 1-2 ತಿಂಗಳು ಕಳೆದರು ಮಕ್ಕಳಿಗೆ ಸರ್ಕಾರ ಪಾಸ್‍ನ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ದುಡ್ಡು ಕೊಟ್ಟೇ ಮಕ್ಕಳು ಶಾಲಾ ಕಾಲೇಜಿಗೆ ಹೋಗಬೇಕಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಬಸ್ಸ್ ಪಾಸ್‍ಗಾಗಿ ಅನೇಕ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ.
ಗ್ರಾಮೀಣ ಭಾಗದಿಂದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಪಾಸ್‍ನ ಸಮಸ್ಯೆಯನ್ನು ಬಗೆಹರಿಸಲು ಇಂದು ಕಾರವಾರದ ಶಾಸಕರ ಕಚೇರಿಯಲ್ಲಿ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕರವರು ಕಾರವಾರ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರು ಹಾಗೂ ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದರು. ಹಳೆಯ ಪಾಸ್ ಇಲ್ಲದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ರಸೀದಿ ಅಥವಾ ಶಾಲೆಯಿಂದ ಪತ್ರವನ್ನು ನೀಡುವಂತೆ ಪ್ರತಿಶಾಲೆಗೂ ಇಂದು ಸಂಜೆಯ ಒಳಗಡೆ ತಿಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು. ಘಟಕ ವ್ಯವಸ್ಥಾಪಕರ ಷರತ್ತಿನಂತೆ ಹಳೆಯ ಪಾಸ್ ಅಥವಾ ಶಾಲಾ ಶುಲ್ಕ ತುಂಬಿದ ರಸೀದಿ ನೀಡುವುದು, ಅಥವಾ ಶಾಲಾ ಗುರುತಿನ ಚೀಟಿ ಹಾಗೂ ನೂತನ ಶಾಲೆಗೆ ಸೇರಿರುವ ವಿದ್ಯಾರ್ಥಿಗಳು ಹಳೆಯ ಪಾಸ್ ಅಥವಾ ಗುರುತಿನ ಚೀಟಿ, ಶಾಲಾ ಶುಲ್ಕ ತುಂಬಿದ ರಸೀದಿಯನ್ನು ನೀಡುವುದು. ಇವೆಲ್ಲದರ ಹೊರತು ಪಡಿಸಿ ಈ ಯಾವುದೇ ದಾಖಲಾತಿಗಳು ಇಲ್ಲದ ವಿದ್ಯಾರ್ಥಿಗಳ ಒಂದು ಪಟ್ಟಿ ತಯಾರಿಸಿ ಕೆ.ಎಸ್.ಆರ್.ಟಿ.ಸಿ. ಘಟಕಕ್ಕೆ ಸಲ್ಲಿಸುವಂತೆ ಪ್ರತಿ ಶಾಲೆಗಳಿಗೂ ತಿಳಿಸುವುಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾನ್ಯ ಶಾಸಕರು ತಿಳಿಸಿದರು.
ಬಸ್‍ನ ನಿರ್ವಾಹಕರು ಶಾಲಾ ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ಪ್ರಯಾಣಿಸುವಾಗ ಪಾಸ್ ಇಲ್ಲವೆಂದು ಕಿರುಕುಳ ನೀಡುತ್ತಿರುವುದರ ಬಗ್ಗೆ ನಮಗೆ ದೂರು ಬಂದಿದೆ. ಕೂಡಲೇ ನಿರ್ವಾಹಕರ ಸಭೆ ಕರೆದು ಪರಿಹಾರ ಸೂಚಿಸಬೇಕು ಹಾಗೆಯೇ ವಿನಂತಿ ನಿಲುಗಡೆಯ ಸ್ಥಳದಲ್ಲಿ ಕಡ್ಡಾಯವಾಗಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಬಸ್ಸಿಗೆ ಹತ್ತಿಸಿಕೊಂಡು ಬರಲು ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸುವಂತೆ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು.