Tuesday, January 21, 2025
ಸುದ್ದಿ

ಎಸ್.ಐ ಪ್ರಕಾಶ್ ದೇವಾಡಿಗರನ್ನ ವರ್ಗಾವಣೆ ಮಾಡಿ – ಗ್ರಾಮಸ್ಧರಿಂದ ಪ್ರತಿಭಟನೆ ಎಚ್ಚರಿಕೆ !! – ಕಹಳೆ ನ್ಯೂಸ್

ಸಮಾಜದಲ್ಲಿ ಸಮಸ್ಯೆಗಳು, ಗಲಭೆಗಳು ಉಂಟಾದಾಗ ಅದನ್ನ ಸರಿಪಡಿಸಿ ಕೇಸು ದಾಖಲಿಸುವ ಕಾರ್ಯವನ್ನ ಅಲ್ಲಿನ ಠಾಣಾ ವ್ಯಾಪ್ತಿಯ ಪೊಲೀಸರು ಮಾಡಬೇಕು. ಆದರೆ ಇಲ್ಲೊಂದು ಕಡೆ ಠಾಣೆಯ ಎಸ್.ಐ ಯಾವುದೇ ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಧರು ಎಸ್.ಐಯನ್ನು ವರ್ಗಾಹಿಸುವಂತೆ ಮನವಿ ಮಾಡಿದ್ದಾರೆ. ಹೌದು, ಕಡಬ ಠಾಣೆಯ ಎಸ್.ಐ ಪ್ರಕಾಶ್ ದೇವಾಡಿಗರನ್ನು ವರ್ಗಾವಣೆ ಮಾಡಬೇಕೆಂದು ಗ್ರಾಮಸ್ಧರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಮಠ ಎಂಬಲ್ಲಿ ಪಂಚಾಯತ್ ಕಟ್ಟಡದಲ್ಲಿ ದಲಿತ ಮಹಿಳೆಯೊಬ್ಬರ ಅಂಗಡಿ ನಡೆಸುತ್ತಿದ್ದ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಹಚ್ಚಿರುವುದರ ಬಗ್ಗೆ ಈವರೆಗೆ ಯಾವುದೇ ತನಿಖೆ ಮಾಡಿಲ್ಲ. ಎಸ್.ಸಿ/ಎಸ್.ಟಿ ಕುಂದುಕೊರತೆ ಸಭೆಯನ್ನು ನಡೆಸದೆ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ದಲಿತ ಮುಖಂಡರ ಮೇಲೆಯೇ ಸುಳ್ಳು ಕೇಸುಗಳನ್ನು ದಾಖಲಿಸಿ ದಲಿತರ ವಿರುದ್ಧ ದಲಿತರನ್ನು ಎತ್ತಿ ಕಟ್ಟುತ್ತಿದ್ದಾರೆ. ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡುವುದು. ಇನ್ನು ಅಕ್ರಮ ಜುಗಾರಿ ಆಡುವರ ಬಗ್ಗೆ ಗ್ರಾಮಸ್ಧರು ಠಾಣೆಗೆ ಮಾಹಿತಿ ನೀಡಿದರೆ, ಠಾಣೆಯ ಸಿಬ್ಬಂಧಿಗಳೇ ಜುಗಾರಿ ಆಡುವವರಿಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ಈ ತಿಂಗಳ 30ರ ಒಳಗೆ ವರ್ಗಾವಣೆ ಮಾಡದಿದ್ದಲ್ಲಿ ಕಡಬ ಠಾಣೆಯ ಮುಂದೆ ಅನಿರ್ದಿಷ್ಟವಾದಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ದೂರಿನ ಸುರಿಮಳೆಯನ್ನು ಗೈದು ಪ್ರತಿಭಟನೆಯ ಎಚ್ಚರಿಕೆಯನ್ನು ದಲಿತ ಸಂಘಟನೆ ಮಹಾ ಒಕ್ಕೂಟ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಾಡಿದ ಮನವಿಯಲ್ಲಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು