Saturday, November 23, 2024
ರಾಜಕೀಯ

ನಾಲ್ವರು ರಾಜ್ಯಸಭಾ ಸಂಸದರೂ ಬಿಜೆಪಿಗೆ : ಚಂದ್ರಬಾಬು ನಾಯ್ಡು ಫುಲ್ ಗರಂ – ಕಹಳೆ ನ್ಯೂಸ್

ನವದೆಹಲಿ : ಪ್ರಧಾನಿ ಪಟ್ಟ ಏರುವ ಕನಸು ಕಾಣುತ್ತಿದ್ದ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬೂ ನಾಯ್ಡುಗೆ ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನೂ ಬಿಡಬೇಕಾಯಿತು. ಜನರು ಹೀನಾಯವಾಗಿ ಸೋಲಿಸಿ, ದೊಡ್ಡ ಪೆಟ್ಟು ಕೊಟ್ಟಿದ್ದಾರೆ. ಅಲ್ಲದೇ ಜಗನ್ ಮೋಹನ್ ರೆಡ್ಡಿ ಆಂಧ್ರ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲ್ಲೇ, ಝಡ್ ಪ್ಲಸ್ ಸೆಕ್ಯುರಿಟಿ ಇದ್ದರೂ ವಿಮಾನ ನಿಲ್ದಾಣದಲ್ಲಿ ಶ್ರೀ ಸಾಮಾನ್ಯನಂತೆ ಫ್ರಿಸ್ಕಿಂಗ್ ಮಾಡಿಸಿಕೊಳ್ಳಬೇಕಾಯಿತು. ನಂತರ ತಮ್ಮ ನೆಚ್ಚಿನ ಮನೆ, ಕಚೇರಿಯನ್ನೂ ಬಿಟ್ಟು ಕೊಡಬೇಕಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಇದ್ದ ನಾಲ್ವರು ರಾಜ್ಯಸಭಾ ಸಂಸದರೂ ಬಿಜೆಪಿಗೆ ಸೇರಲು ಸಿದ್ಧರಾಗುತ್ತಿದ್ದು, ಏನು ಮಾಡಬೇಕೆಂದು ತೋಚದ ಚಂದ್ರಬಾಬು ನಾಯ್ಡು ಫುಲ್ ಗರಂ ಆಗಿದ್ದಾರೆ. ‘ನಮ್ಮ ಪಕ್ಷದ ಶಕ್ತಿ ಕುಂದಿಸಲು ಬಿಜೆಪಿ ಯತ್ನಿಸುತ್ತಿದೆ. ಉದ್ದೇಶಪೂರ್ವಕವಾಗಿ ನಾಯಕರಿಂದಲೇ ಇಂತಹ ಕೃತ್ಯ ನಡೆಯುತ್ತಿದೆ,’ ಎಂದು ಅವರು ಗೋಳಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಬಿಜೆಪಿ ಇಂತಹ ಯತ್ನ ಮಾಡುತ್ತಿರುವುದು ಖಂಡನೀಯ, ಇಂತಹ ಕೃತ್ಯ ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಇಂತಹ ಯತ್ನಗಳು ನಡೆದಿವೆ.  ಆಂಧ್ರ ಪ್ರದೇಶದ ಹಿತದೃಷ್ಟಿಯಿಂದ ನಾವು ನಿರಂತರವಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದೆವು. ಇದರಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ,’ ಎಂದರು.

ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ಟಿಡಿಪಿ ಅತೀ ಕಡಿಮೆ ಸಂಖ್ಯೆ ಸ್ಥಾನ ಪಡೆದು ಸೋಲನ್ನು ಅನುಭವಿಸಿದ್ದು, ಇದಾದ ಬೆನ್ನಲ್ಲೇ ಹಲವು ಮುಖಂಡರು ಪಕ್ಷಾಂತರ ಮಾಡಿದ್ದರು.  ಇದೀಗ ಮತ್ತೆ ನಾಲ್ವರು ರಾಜ್ಯಸಭಾ ಸಂಸದರು ಬಿಜೆಪಿ ಕೈ ಹಿಡಿದಿದ್ದರು.