Monday, January 20, 2025
ಕ್ರೀಡೆ

2022ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್‍ಗೆ ಸ್ಥಾನ.. – ಕಹಳೆ ನ್ಯೂಸ್

ಇಂಗ್ಲೆಂಡಿನ ಬರ್ಮಿಂಗ್‍ಹ್ಯಾಮ್‍ನಲ್ಲಿ 2022ಕ್ಕೆ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್‍ಗೆ ಸ್ಥಾನ ಕಲ್ಪಿಸಲು ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್‍ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಕ್ರಿಕೆಟ್ ಆಯೋಜಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದ ಐಸಿಸಿ ಹಾಗೂ ಇಸಿಬಿಂ ಈ ನಿರ್ಧಾರವನ್ನು ಸ್ವಾಗತಿಸಿವೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪುರುಷರ ಕ್ರಿಕೆಟ್ ಪಂದ್ಯಾಟವೂ ನಡೆದಿತ್ತು. ಆ ಸಂದರ್ಭದಲ್ಲಿ ದ.ಆಫ್ರಿಕಾ ಚಿನ್ನದ ಪದಕಗಳಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಸಿಬಿ ಜತೆ ಸೇರಿ ತಾವು ಸಲ್ಲಿಸಿದ ಪ್ರಸ್ತಾವವನ್ನು ಪರಿಗಣಿಸಿ, ಮಹಿಳಾ ಕ್ರಿಕೆಟನ್ನು ಕ್ರೀಡಾಕೂಟದ ಭಾಗವಾಗಿಸಲು ಸಿಜಿಎಫ್ ನಿರ್ಧರಿಸಿದ್ದು ಸಂತೋಷ ತಂದಿದೆ. ಮಹಿಳೆಯರ ಸಶಕ್ತೀಕರಣಕ್ಕೆ ಇದು ಕಾರಣವಾಗಲಿದೆ. ಕ್ರಿಕೆಟ್ ಸ್ಫೂರ್ತಿಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಮನು ಸಾವ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.