Monday, January 20, 2025
ಸುದ್ದಿ

ವಿದೇಶದಲ್ಲಿ ಬೆಳಗಿದ ಮಲೆನಾಡ ಯೋಗ ಬಾಲೆಯರು – ಕಹಳೆ ನ್ಯೂಸ್

ಯೋಗ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿದೆ. ಯೋಗದ ಮೋಡಿಗೆ ಮಾರು ಹೋಗದವರೇ ಇಲ್ಲ. ನಮ್ಮ ದೇಶದ ಯೋಗ ಈಗ ವಿದೇಶ ನೆಲದಲ್ಲಿ ಎಲ್ಲೇ ಮೀರಿ ಬೆಳೆಯುತ್ತಿದೆ. ತನ್ನ ಮನ-ತನವನ್ನು ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಲು ಎಲ್ಲರಿಗೂ ಯೋಗ ಬೇಕು. ಹಾಗೆ ಯೋಗ ನಮ್ಮ ದೇಶದ ಅದೆಷ್ಟೂ ಯೋಗಪಟುಗಳಿಗೆ ದೇಶ ವಿದೇಶಗಳಲ್ಲಿ ಉದ್ಯೋಗವನ್ನು ದೊರಕಿಸಿದೆ.

ಇದೀಗ ನಮ್ಮ ರಾಜ್ಯದ ಇಬ್ಬರು ಹಳ್ಳಿಗಾಡಿನ ಯುವತಿಯರು ಚೀನಾದಲ್ಲಿ ಯೋಗ ಪಾಠ ಹೇಳಿ ಕೊಡುವ ಮೂಲಕ ವಿದೇಶದಲ್ಲಿ ಯೋಗವನ್ನು ವಿಸ್ತರಿಸಿದ್ದರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೈರಾಪುರ ಗ್ರಾಮದ ಸಹೋದರಿಯರಾದ ಪೂಜಾ ಮತ್ತು ಅಪೂರ್ವ ಚೀನಾದಲ್ಲಿ ಯೋಗ ಶಿಕ್ಷಕಿಯರಾಗಿ 3 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ತಂದೆ ಗೋಪಾಲರವರು. ನಾಟಿ ವೈದ್ಯರು ಹಾಗೂ ಯೋಗಭ್ಯಾಸಿಯೂ ಹೌದು. ತಮ್ಮ ಮಕ್ಕಳಿಗೂ ಯೋಗವನ್ನು ಹೇಳಿಕೊಡುವ ಮೂಲಕ ಮಕ್ಕಳ ಯೋಗ ಸಾಹಸಕ್ಕೆ ತಂದೆಯೇ ಗುರು ಎನ್ನಿಸಿಕೊಂಡಿದ್ದಾರೆ. ತನ್ನ ತಂದೆಯೇ ಯೋಗ ಗುರುವಾಗಿದ್ದರಿಂದ ನಮಗೆ ಚಿಕ್ಕ ವಯಸ್ಸಿನಲ್ಲಿಯೇ ಯೋಗ ಕಲಿಯುವ ಅವಕಾಶ ದೊರಕಿತು ಎನ್ನುತ್ತಾರೆ ಪೂಜಾ ಮತ್ತು ಅಪೂರ್ವ.

ಜಾಹೀರಾತು
ಜಾಹೀರಾತು
ಜಾಹೀರಾತು