Monday, January 20, 2025
ಸುದ್ದಿ

ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ – ಕಹಳೆ ನ್ಯೂಸ್

ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯ ಕ್ರೀಡಾ ಸಂಘದ ವತಿಯಿಂದ ಜೂ.21ರಂದು ‘ವಿಶ್ವ ಯೋಗ ದಿನಾಚರಣೆ’ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಮತ್ತು ಯೋಗ ತರಬೇತುದಾರ ಉದಯಕೃಷ್ಣ ಭಟ್ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕ ಶಿವಕುಮಾರ್ ಸಾಯ ಪ್ರಸ್ತಾವಿಸಿದರು. ಕ್ರೀಡಾ ಸಂಘದ ಅಧ್ಯಕ್ಷೆ ಸಹನಕುಮಾರಿ ಮಾತನಾಡಿದರು. ಕ್ರೀಡಾ ಸಂಘದ ಸದಸ್ಯ ಪೃಥ್ವಿರಾಜ್ ಸ್ವಾಗತಿಸಿ, ಉಪಾಧ್ಯಕ್ಷೆ ಆಯಿಷತ್ ಶಾಹಿಲ ವಂದಿಸಿದರು. ವಿದ್ಯಾರ್ಥಿ ನಾಯಕ ರೂಪೇಶ್, ಮಹಮ್ಮದ್ ಅಜ್ಮಲ್ ಹಾಗೂ ಅಬೂಬಕ್ಕರ್ ಸಿಯಾಬ್ ನೇತೃತ್ವ ವಹಿಸಿದ್ದರು.ಕಾರ್ಯದರ್ಶಿ ತನುಶ್ರೀ ಪಿ. ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು