Tuesday, January 21, 2025
ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ – ಕಹಳೆ ನ್ಯೂಸ್

ದಿನಾಂಕ 21.06.2019ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

“ ಅನಾದಿ ಕಾಲದಿಂದಲೂ ಯೋಗ ಆಚರಣೆಯಲ್ಲಿದ್ದು, ಕಾಲಾನುಕ್ರದಲ್ಲಿ ಅದು ಮರೆತು ಹೋಗಿದ್ದು, ತದನಂತರ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಯೋಗ ವಿಶ್ವದಲ್ಲಿ ಮನ್ನಣೆ ಪಡೆದು ವಿಶ್ವಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕಳೆದ 5 ವರುಷಗಳಿಂದ ಜನವರಿ 21 ರಂದು ವಿಶ್ವ ಯೋಗ ದಿನವನ್ನು ಆಚರಿಸುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಗದಿಂದ ಆರೋಗ್ಯ ವೃದ್ಧಿಸುತ್ತದೆ. ಯೋಗ, ಕೇವಲ ಯೋಗ ದಿನಕ್ಕೋಸ್ಕರ ಆಗದೇ, ನಿತ್ಯ ಜೀವನ ಪದ್ಧತಿ ಆಗಬೇಕು” ಎಂದು ಶ್ರೀರಾಮ ಶಾಲೆಯ ಯೋಗ ತರಬೇತುದಾರರಾದ ಸಂಜಯ್ ಇವರು ಯೋಗದ ಮಹತ್ವ, ಹಿನ್ನಲೆ ತಿಳಿಸುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿಯಾದ ಆದಿಶ್ರೀ ಪ್ರೇರಣಾ ಗೀತೆ ಹಾಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರಾತ್ಯಕ್ಷಿತೆ ಮಾಡಿದರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಹಿರಿಯ ವಿದ್ಯಾರ್ಥಿನಿ, ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ಧ ಶ್ರೀಮತಿ ಸುಪ್ರಿತಾಸಂಜಯ್, ಶಾಲಾ ಪೋಷಕರಾದ ರಾಜೀವಿ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಮ್ಯ ಸ್ವಾಗತಿಸಿ, ರಾಧಿಕ ನಿರೂಪಿಸಿದರು