ಜೂನ್ 21: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಮತ್ತು ಗ್ರಾಮ ವಿಕಾಸ ಸಮಿತಿ ಅಮ್ಟೂರು ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ – ಕಹಳೆ ನ್ಯೂಸ್
ಯೋಗಾಸನ ದೇಹ ಹಾಗೂ ಮನಸ್ಸನ್ನು ಒಗ್ಗೂಡಿಸುವಂತಹ ಕ್ರಿಯೆ. ಆಂತರಿಕ ಹಾಗೂ ಬಾಹ್ಯವಾಗಿ ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಲು ಯೋಗಾಸನವು ಸರಳ ಹಾಗೂ ಸುಲಭ ವಿಧಾನ. ದೈನಂದಿನ ಯೋಗಾಭ್ಯಾಸದಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಶ್ರೀರಾಮ ವಿದ್ಯಾಕೇಂದ್ರ ಹಾಗೂ ಗ್ರಾಮ ವಿಕಾಸ ಸಮಿತಿ ಅಮ್ಟೂರು ಇದರ ಆಶ್ರಯದಲ್ಲಿ, ಅಮ್ಟೂರು ಕೇಶವನಗರದ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಜಯಲಕ್ಷ್ಮೀ ಇವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ, ವಿಶ್ವನಾಥ ಪ್ರಭು, ಗೋಳ್ತಮಜಲು ಪಂಚಾಯಿತಿ ಸದಸ್ಯರಾದ ಜಯಂತ ಗೌಡ ಹಾಗೂ ಶಾರದಾಂಬಾ ಭಜನಾ ಮಂದಿರ, ಕೇಶವನಗರ ಅಮ್ಟೂರು ಇದರ ಅಧ್ಯಕ್ಷರಾದ ನಾರಾಯಣ ಗೌಡ ಇವರು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕರಾದ ಗೋಪಾಲ್ ಶ್ರೀಮಾನ್ ಇವರು ಯೋಗದ ಅಭ್ಯಾಸಕ್ಕೆ ಚಾಲನೆ ನೀಡಿದರು, ಸೇರಿದ್ದಂತಹ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ನಡೆಯಿತು.
ಶಿಕ್ಷಕರಾದ ಮನೋಜ್ ಶ್ರೀಮಾನ್ ಸ್ವಾಗತಿಸಿ ಅಮ್ಟೂರು ಗ್ರಾಮ ವಿಕಾಸ ಸಮಿತಿಯ ನಿರ್ವಾಹಕಿ ರೇಷ್ಮಾ ಇವರು ವಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಕುಶಾಲಪ್ಪ ಅಮ್ಟೂರು ಹಾಗೂ ಶಿಕ್ಷಕಿ ಭಾಗ್ಯ ಉಪಸ್ಥಿತರಿದ್ದರು