ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಹೊಳ್ಳರಬೈಲು ಪ್ರದೇಶದಲ್ಲಿ ತಿಮ್ಮಪ್ಪ ಪೂಜಾರಿಯವರ ಮನೆ ಸಮೀಪ ಸ್ಥಳೀಯ ನಿವಾಸಿಯೋರ್ವರು ಜೆಸಿಬಿ ಬಳಸಿ ರಸ್ತೆಯ ಒಂದು ಪಾಶ್ರ್ವವನ್ನು ಅಗೆದಿದ್ದು, ಇದ್ದರಿಂದ ಸಾರ್ವಜನಿಕ ಸಂಪರ್ಕ ರಸ್ತೆ ಕುಸಿಯುವ ಸ್ಥಿತಿಯಲ್ಲಿದೆ.
ರಸ್ತೆ ಕಾಮಗಾರಿ ವೇಳೆ ಅಳವಡಿಸಿರುವ ಮೋರಿ ಅಸಮರ್ಪಕವಾಗಿದ್ದು, ನೀರು ಸರಿಯಾಗಿ ಹರಿದು ಹೋಗದೇ ಸ್ಥಳಿಯ ಮನೆಗಳಿಗೆ ಕೃತಕ ನೆರೆಯಿಂದ ತೊಂದರೆಯಾಗುತ್ತಿದೆ. ಈ ಹಿಂದೆಯೂ ಇದರ ಬಗ್ಗೆ ಬಂಟ್ವಾಳ ಶಾಸಕರಿಗೆ ದೂರು ನೀಡಲಾಗಿತ್ತು.
ಸ್ಥಳಕ್ಕೆ ಇಂದು ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿ ರಸ್ತೆಯನ್ನು ಉಳಿಸುವ ನಿಟ್ಟಿನಲ್ಲಿ ತಡೆಗೋಡೆ ತುರ್ತಾಗಿ ನಿರ್ಮಿಸಬೇಕು. ಹಾಗೂ ನೀರು ಸರಾಗವಾಗಿ ಸಂಚರಿಸಲು ವ್ಯವಸ್ಥೆ ಮಾಡಿಕೊಡುವಂತೆ ಇಂಜಿನಿಯರ್ ಬಳಿ ಆಗ್ರಹಿಸಿದರು. ಗ್ರಾಮದ ಸಮಸ್ಯೆಗಳ ಕುರಿತು ಹೇಳಿಕೊಂಡರು.
ಈ ಸಮಯದಲ್ಲಿ ಬಿಜೆಪಿ ಬಂಟ್ವಾಳ ಶಕ್ತಿಕೇಂದ್ರ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಳ್ಳಿಗೆ ಪಂಚಾಯತ್ ಪಿಡಿಓ ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.