Wednesday, January 22, 2025
ಸುದ್ದಿ

ಜೆಸಿಐ ನೆಕ್ಕಿಲಾಡಿ ಮತ್ತು ಶ್ರೀರಾಮ ಪ್ರೌಢ ಶಾಲೆಯ ಸಹಯೋಗದಲ್ಲಿ ಉಪ್ಪಿನಂಗಡಿಯಲ್ಲಿ ಯೋಗ ದಿನಾಚರಣೆ – ಕಹಳೆ ನ್ಯೂಸ್

ಉಪ್ಪಿನಂಗಡಿ:  ಉಪ್ಪಿನಂಗಡಿಯಲ್ಲಿ ಶ್ರೀರಾಮ ಪ್ರೌಢ ಶಾಲೆ ನಟ್ಟಿಬೈಲು ಮತ್ತು ಜೆ.ಸಿ.ಐ ನೆಕ್ಕಿಲಾಡಿಯ ಸಹಯೋಗದೊಂದಿಗೆ ಶ್ರೀರಾಮ ಶಾಲೆ ನಟ್ಟಿಬೈಲು ಇಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಯೋಗದಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ವರ್ಧಿಸುತ್ತದೆ. ಅದನ್ನು ನಾವು ದೈನಂದಿನ ಅಭ್ಯಾಸ ಕ್ರಮವಾಗಿ ಮಾಡಿಕೊಳ್ಳಬೇಕು ಎಂದು ಕಾರ್ಯಕ್ರಮದ ಅತಿಥಿಯಾದ ಜೆ.ಸಿ.ಐ ನೆಕ್ಕಿಲಾಡಿ ಘಟಕದ ಅಧ್ಯಕ್ಷರಾದ ಜೆ.ಎಫ್.ಡಿ ವಿನಿತ್ ಶಗ್ರಿತ್ತಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಸರಿಸುಮಾರು ಇನ್ನೂರು ವಿಧ್ಯಾರ್ಥಿಗಳು ಯೋಗ ಪ್ರದರ್ಶನ ಮಾಡಿದರು. ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಎಫ್‍ಪಿ ಶಿವಕುಮಾರ್ ಬಾರಿತ್ತಾಯ, ಜೆಸಿಐ ನೆಕ್ಕಿಲಾಡಿ ಘಟಕದ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಜೆಸಿ ಅಮಿತಾ ಹರೀಶ್, ಜೆಸಿಐ ನೆಕ್ಕಿಲಾಡಿ ಘಟಕದ ಉಪಾಧ್ಯಕ್ಷೆ ಹಾಗೂ ನೆಕ್ಕಿಲಾಡಿ ಗ್ರಾ.ಪಂ. ನೂತನ ಸದಸ್ಯೆ ಶ್ರೀಮತಿ ಅನಿಮಿನೇಜಸ್, ಶ್ರೀರಾಮ ಶಾಲೆ ವೇದಶಂಕರ ನಗರ ನಟ್ಟಿಬೈಲು ಇಲ್ಲಿನ ಪ್ರಾಥಮಿಕ ವಿಭಾಗದ ಮುಖ್ಯ ಮಾತಾಜಿ ಶ್ರೀಮತಿ ವಿಮಲತೇಜಾಕ್ಷಿ ಉಪಸ್ಥಿತರಿದ್ದರು.

ಪ್ರೌಢ ವಿಭಾಗದ ಮುಖ್ಯ ಗುರುಗಳು ಶ್ರೀ ರಘುರಾಮ ಸಿ. ಭಟ್ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.