Wednesday, January 22, 2025
ಸುದ್ದಿ

ನಗರ ಪೋಲಿಸ್ ಆಯುಕ್ತರಿಂದ ಹೋಂಗಾರ್ಡ್ ಸಿಬ್ಬಂದಿಗೆ ಪ್ರಶಂಸೆ – ಕಹಳೆ ನ್ಯೂಸ್

ಮಂಗಳೂರು:-ತೊಕ್ಕೊಟ್ಟು ಬಸ್ ಸ್ಟಾಂಡ್ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ನಡೆಸಿದ ಆರೋಪಿತನನ್ನು ಹಿಡಿಯುವಲ್ಲಿ ಸಹಕರಿಸಿದ ಹಮೀದ್ ಪಾವಳ, ಹೋಂ ಗಾರ್ಡ್ ಸಿಬ್ಬಂದಿಯನ್ನು ಮಾನ್ಯ ಮಂಗಳೂರು ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್‍ರವರು ಪ್ರಶಂಸನೀಯ ಪತ್ರ ನೀಡಿ ಪ್ರಶಂಶಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಮೀದ್ ಪಾವಳ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದ ಗೃಹರಕ್ಷಕ ಸಿಬ್ಬಂದಿಯಾಗಿರುವ ಇವರು ಪ್ರಸ್ತುತ ಕಂಕನಾಡಿ ಸೌತ್ ಟ್ರಾಫಿಕ್ ಠಾಣೆಯಲ್ಲಿ ಗೃಹರಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ಯ ಪೋಲಿಸ್ ಆಯುಕ್ತರು ನನಗೆ ಪ್ರಶಂಸನೀಯ ಪತ್ರ ನೀಡಿದ್ದು, ಇದು ನನಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಪ್ರೇರಣೆ ನೀಡಿದೆ ಎಂದು ಹಮೀದ್ ಪಾವಳ ತಿಳಿಸಿದ್ದಾರೆ.