ಸುಮಾರು ಏಳು ವರ್ಷಗಳ ಹಿಂದೆಯೇ ಅಂದರೆ 2012ರಲ್ಲೇ ಈ ನಿಯಮವನ್ನು ಟಿವಿ ಪ್ರಸಾರ ವಿಷಯಗಳಿಗೆ ಸಂಬಂಧಿಸಿದ ದೂರುಗಳ ಮಂಡಳಿ ಸಲಹೆಗಳನ್ನು ಜಾರಿಗೊಳಿಸಿತ್ತು. ಆದರೆ ಟಿವಿ ವಾಹಿನಿಗಳು ಅದನ್ನು ಅಷ್ಟಾಗಿ ಆಚರಣೆ ತಂದಿರಲಿಲ್ಲ. ಈಗ ಅಖಿಲ ಭಾರತೀಯ ಪ್ರಸಾರ ಸಂಸ್ಥೆಗೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಇದೇ ನಿಯಮಗಳನ್ನು ಜಾರಿಗೊಳಿಸಲು ಶಿಫಾರಸು ಮಾಡಿದೆ.
ಮಕ್ಕಳ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಹೊಸ ನೀತಿ ನಿಯಮವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಶಿಫಾರಸು ಮಾಡಿದೆ. ಇನ್ನು ಮುಂದೆ ಮಕ್ಕಳ ಕೈಲಿ ಅಸಭ್ಯ, ಅಶ್ಲೀಲ ನೃತ್ಯಗಳನ್ನು ಮಾಡಿಸುವಂತಿಲ್ಲ. 12 ವರ್ಷದ ಒಳಗಿನ ಮಕ್ಕಳನ್ನು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅಶ್ಲೀಲವಾಗಿ, ವಯಸ್ಕರ ರೀತಿಯಲ್ಲಿ ನೃತ್ಯ ಮಾಡಿಸುವಂತಿಲ್ಲ ಎಂದು ಹೇಳಿದೆ.
ಖಾಸಗಿ ಟಿವಿ ವಾಹಿನಿಗಳಿಗೆ ಕಳುಹಿಸಿರುವ ಪ್ರತಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಸಭ್ಯ, ಅಶ್ಲೀಲವಾಗಿ, ಅನುಚಿತವಾಗಿ ತೋರಿಸುವಂತಿಲ್ಲ ಎಂದು ತಿಳಿಸಿದೆ. ಅದೇ ರೀತಿ ಕೆಟ್ಟ ಸನ್ನೆಗಳು, ಸಂಭಾಷಣೆ ಮತ್ತು ಡ್ಯಾನ್ಸ್ ಮೂವ್‍ಮೆಂಟ್ ಮಾಡುವಂತಿಲ್ಲ ಎಂದು ಸೂಚಿಸಿದೆ.
ಈ ಕುರಿತು ‘ಕಹಳೆ ನ್ಯೂಸ್’ ವಾಹಿನಿಯಲ್ಲಿ ಇದೇ ಬರುವ ಸೋಮವಾರ ‘ಅಶ್ಲೀಲ ನೃತ್ಯ’ ಬ್ಯಾನ್!! ಎಂಬ ಬಿಗ್ ಡಿಬೇಟ್ ಕಾರ್ಯಕ್ರಮ ನೇರಪ್ರಸಾರವಾಗಲಿದೆ, ಆಸಕ್ತರು ನೇರಪ್ರಸಾರದಲ್ಲಿ 9606964495 ಈ ನಂಬರ್ ಗೆ ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.