ಅಡ್ಯನಡ್ಕ: ಜೆಸಿಐ ವಿಟ್ಲ ಮತ್ತು ಸಾಹಿತ್ಯ ಸಂಘ ಜನತಾ ಪದವಿಪೂರ್ವ ಕಾಲೇಜು ಅಡ್ಯನಡ್ಕ ಸಹಯೋಗದಲ್ಲಿ ‘ಗುರಿ ನಿರ್ಧಾರ’ ಕುರಿತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಜೂ. 21ರಂದು ಜನತಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಜೆಸಿಐ ಶ್ರೀ ವಿಯಾನ್ ರೋಬಿನ್ ವೇಗಸ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಜೆಸಿಐ ಅಧ್ಯಕ್ಷ ಶ್ರೀ ಬಾಲಕೃಷ್ಣ, ಪ್ರಾಂಶುಪಾಲ ಶ್ರೀ ಡಿ.ಶ್ರೀನಿವಾಸ್, ಸಾಹಿತ್ಯ ಸಂಘದ ಸಂಯೋಜಕ ಹಾಗೂ ಹಿಂದಿ ಉಪನ್ಯಾಸಕ ಶ್ರೀ ಸೋಮಶೇಖರ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.