ಉಪ್ಪಿನಂಗಡಿ ; ವಿಶ್ವ ಹಿಂದೂ ಪರಿಷತ್, ಭಜರಂಗದಳ ಕರಾಯ ಹಾಗೂ ಕೆಸರ‍್ಡ್ ಒಂಜಿ ದಿನ ಕಾರ್ಯಕ್ರಮ ಸಮತಿ ಕರಾಯ ಇದರ ಸಂಯುಕ್ತ ಆಶ್ರಯದಲ್ಲಿ 2ನೇವರ್ಷದ ಕೆಸರ‍್ಡ್ ಒಂಜಿ ದಿನ ಕಾರ್ಯಕ್ರಮ ಕರಾಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ನಡೆಯಲಿದೆ. ಹಾಗೂ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯವೂ ನಾಳೆ ಆದಿತ್ಯವಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 9 ಗಂಟೆಗೆ ಶ್ರೀ ಕೃಷ್ಣ ಭಜನ ಮಂದಿರದಿಂದ ಶೋಭಯಾತ್ರ ಹೊರಡುವ ಮೂಲಕ ಆರಂಭವಾಗಲಿದ್ದು, ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ ಉದ್ಘಾಟಸಲಿದ್ದಾರೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷರಾಗಿ ವಿಶ್ವ ಹಿಂದೂ ಪರಿಷತ್, ಬೆಳ್ತಂಗಡಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ದಿಕ್ಸೂಚಿ ಭಾಷಣಗಾರನಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರಿನ ಕಾರ್ಯದರ್ಶಿ ಶರಣ್ ಪಂಪವೇಲ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಹರೀಶ್ ಪೂಂಜ ಮತ್ತು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತಿಯುರುತ್ತಾರೆ.
ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹಾಗು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಹಗ್ಗಾ ಜಗ್ಗಾಟ, ಸಂಗೀತ ಕುರ್ಚಿ, ಮಡಕೆ ಹೊಡೆಯುವುದು ಮುಂತಾದ ಹಲವು ಸ್ಪರ್ಧೆಗಳು ನಡೆಯಲಿದೆ. ಹಾಗೆ ಈ ಕಾರ್ಯಕ್ರಮ ಮನರಂಜನೆಗೋಸ್ಕರ ಸಂಘಟನಾತ್ಮಕ ಉದ್ದೇಶದಿಂದ ನಡೆಯುವುದರಿಂದ ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ.